Telegram Join our Telegram Channel for Daily Latest News Updates! Join Now ×

ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು

ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು

ಮಡಿಕೇರಿ: ಜಾರ್ಖಂಡ್‌ನ ರಾಂಚಿಯಲ್ಲಿ ಸೆಪ್ಟೆಂಬರ್ 10ರಿಂದ 12ರವರೆಗೆ ನಡೆಯಲಿರುವ CISCE Regional Hockey Championship 2026 ಕ್ರೀಡಾಕೂಟಕ್ಕೆ ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

WhatsApp Channel Join Now
Telegram Channel Join Now

 

ಶಾಲೆಯ ಆದ್ಯ ದೇಚಮ್ಮ ಅವರು ಸ್ಟ್ರೈಕರ್ ಆಗಿ, ಜಾಹ್ನವಿ ಎಂ.ಎ. ಅವರು ಫಾರ್ವರ್ಡ್ ಪ್ಲೇಯರ್ ಆಗಿ ಹಾಗೂ ಗ್ರಂಥ ಸೊಮ್ಮಣ್ಣ ಅವರು ಸ್ಟ್ಯಾಂಡ್‌ಬೈ ಪ್ಲೇಯರ್ ಆಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

 

ಈ ವಿದ್ಯಾರ್ಥಿನಿಯರಿಗೆ ಶಾಲೆಯ ಕ್ರೀಡಾ ತರಬೇತುದಾರರಾದ ಹಂಚೆಟ್ಟಿರ ಈರಪ್ಪ ಹಾಗೂ ಕ್ರೀಡಾ ಶಿಕ್ಷಕಿ ಸೀಮಾ ಪರ್ವೀನ್ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.

 

ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಮೂವರು ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಕರ್ನಾಟಕ ಹಾಗೂ ಮಡಿಕೇರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.

ವರದಿಗಾರರು

ಜಾನ್ಸನ್ ಕೊಡಗು 

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!

Was this article helpful?
YesNo

Live Cricket Info

Related Articles

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.