ಬೆಂಗಳೂರಿನ 27 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನ (AEE )ವಿವಿಧೆಡೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ!

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬರೋಬ್ಬರಿ ಶೇಕಡಾ 40 ರಷ್ಟು ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆಯು ಸಿವಿಲ್ ಮತ್ತು ಪರಿಸರ ವಿಭಾಗದ 27 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನು (ಎಇಇ) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪರಿಸರ ಇಂಜಿನಿಯರಿಂಗ್ ಹುದ್ದೆಗಳನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಭರ್ತಿ ಮಾಡುವುದು ಕಡ್ಡಾಯ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಇದೇ ಕಾರಣವನ್ನು ನಗರಾಭಿವೃದ್ಧಿ ಇಲಾಖೆ ತನ್ನ ವರ್ಗಾವಣೆ ಆದೇಶದಲ್ಲಿ ಉಲ್ಲೇಖಿಸಿದೆ. ಸಿಬ್ಬಂದಿ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣಾ ನಿಯಮಗಳ ಪಾಲನೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಇಲಾಖೆ ಕಳವಳ ವ್ಯಕ್ತಪಡಿಸಿದೆ.
ವರ್ಗಾವಣೆಗೊಂಡ ಪ್ರಮುಖರು ಯಾರು?
ವರ್ಗಾವಣೆಗೊಂಡವರ ಪಟ್ಟಿಯಲ್ಲಿ ಜಿಬಿಎಯಲ್ಲಿದ್ದಸಹಾಯಕ ಕಾರ್ಯ ಪಾಲಕ ಇಂಜಿನಿಯರ್ಗಳಾದ ಸಂತೋಷಕುಮಾರ್ ಕಡ್ಡಿ, ಜೆ. ಚಿತ್ರಾ, ಎನ್.ಕೆ. ಸಪ್ನಾ, ಬಿ.ಆರ್. ಸೌಮ್ಯಾ, ಆರ್. ವೆಂಕಟೇಶ್, ಜೆ.ಕೆ. ರವಿಕುಮಾರ್, ಎಂ.ಎಸ್. ಮಮತಾ, ಎಂ. ನೇತ್ರಾವತಿ ಅವರನ್ನು ಬಾಗಲಕೋಟೆ, ಕೋಲಾರ, ಚಿತ್ರದುರ್ಗ, ಕೊಡಗು, ಬಳ್ಳಾರಿ, ಕೊಪ್ಪಳ, ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಯ ವಿವಿಧ ನಗರಸಭೆಗಳಿಗೆ ವರ್ಗಾಯಿಸಲಾಗಿದೆ.
ಪರಿಸರ ಇಂಜಿನಿಯರ್ಗಳಾದ ಜ್ಯೋತಿ ಜಿ. ಚೌಳಲ್ಕರ್, ಎಂ.ಎಸ್. ರೇಖಾ, ಜಿ.ಬಿ. ಪೂರ್ಣಿಮಾ, ಶ್ರೀನಿಧಿ, ಎಲ್. ತೀರ್ಥ ಪ್ರಸಾದ್, ಡಿ. ಲೋಹಿತ್, ಟಿ.ಜೆ. ಶಶಿಕಲಾ, ಎಂ.ಎನ್. ಶೋಭಾ, ಎಂ.ಎಂ. ಅಭಿಲಾಷ, ಶಿಲ್ಪಶ್ರೀ ಅವರನ್ನು ಮಡಿಕೇರಿ, ಕುಶಾಲನಗರ, ಸಕಲೇಶಪುರ, ಕುಮಟಾ, ಮುದ್ದೇಬಿಹಾಳ, ಬಸವನಬಾಗೇವಾಡಿ, ಅಂಕೋಲಾ, ಹೂವಿನಹಡಗಲಿ, ಕಮಲಾಪುರ, ಕಂಪ್ಲಿಗೆ ವರ್ಗಾವಣೆ ಮಾಡಲಾಗಿದೆ.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo




