ಮಡಿಕೇರಿಯಲ್ಲಿ ಮಾನವೀಯತೆ ಎತ್ತಿಹಿಡಿದ ಅಂಗಾಂಗ ದಾನ
ಮಡಿಕೇರಿ :ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಮಹತ್ವದ ಅಂಗಾಂಗ ದಾನ ಪ್ರಕ್ರಿಯೆ.
ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ: ಮಗನನ್ನು ಕಳೆದುಕೊಂಡ ಆಕ್ರಂದನದ ನಡುವೆಯೂ ಹಲವರ ಜೀವ ಉಳಿಸಲು ಮುಂದಾದ ಪೋಷಕರು.
ತಜ್ಞ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ: ಮೈಸೂರು ಮಣಿಪಾಲ್ ಆಸ್ಪತ್ರೆ ವೈದ್ಯರು ಹಾಗೂ ಮಡಿಕೇರಿ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರ ನೇತೃತ್ವದಲ್ಲಿ ಪ್ರಕ್ರಿಯೆ ಬಿರುಸ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಬೋಧಕ ಆಸ್ಪತ್ರೆಯಲ್ಲಿ ಮಾನವೀಯತೆ ಎತ್ತಿಹಿಡಿಯುವಂತಹ ಅತ್ಯಂತ ಸಂವೇದನಾಶೀಲ ಘಟನೆಯೊಂದು ನಡೆದಿದೆ. ದುರಾದೃಷ್ಟವಶಾತ್ ಮೆದುಳು ನಿಷ್ಕ್ರಿಯಗೊಂಡ ಯುವಕನೊಬ್ಬನ ಅಂಗಾಂಗಗಳನ್ನು ದಾನ ಮಾಡಲು ಆತನ ಕುಟುಂಬಸ್ಥರು ಒಪ್ಪಿಗೆ ನೀಡುವ ಮೂಲಕ ಇತರ ಹಲವು ಜನರಿಗೆ ಮರುಜೀವ ನೀಡಲು ಮುಂದಾಗಿದ್ದಾರೆ. ಬುಧವಾರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಕುರಿತ ವಿವರವಾದ ವರದಿ ಇಲ್ಲಿದೆ ನೋಡಿ…”
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕದಲ್ಲಿ ಅಂಗಾಂಗ ಹಿಂಪಡೆಯುವ ಹಾಗೂ ಕಸಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಈ ಕಠಿಣ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ನಡೆಸುತ್ತಿದ್ದು, ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಲೋಕೇಶ್, ಡಿ.ಎಸ್.ಎಂ. ಡಾ. ನಂಜುಂಡ, ಡಾ. ಸೋಮಶೇಖರ್, ಡಾ. ನಿಶಿತ್ ಜೋಸೆಫ್ ಹಾಗೂ ಡಾ. ವಿನೋದ್ ಕುಮಾರಿ ಅವರ ನೇತೃತ್ವದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆ ಸುಗಮವಾಗಿ ನೆರವೇರುತ್ತಿದೆ.
ಮಗನನ್ನು ಕಳೆದುಕೊಂಡ ತೀವ್ರ ನೋವು ಮತ್ತು ಆಕ್ರಂದನ ಆಸ್ಪತ್ರೆಯ ಆವರಣದಲ್ಲಿ ಮುಗಿಲು ಮುಟ್ಟಿದ್ದರೂ, ತಮ್ಮ ಮಗನ ಅಂಗಾಂಗಗಳಿಂದ ಮತ್ತೊಬ್ಬರ ಬಾಳಿಗೆ ಬೆಳಕಾಗಲಿ ಎಂಬ ಕುಟುಂಬಸ್ಥರ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂತಾಪ
ಅಮರ ಚೇತನ ಯೋಗೇಶ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
ನ್ಯೂಸ್ ನೆಪ್ಚೂನ್ ಕಡೆಯಿಂದ ಭಾವಪೂರ್ಣ ಪ್ರಣಾಮಗಳು!
- ವರದಿಗಾರರು ಜಾನ್ಸನ್ ಕೊಡಗು
Live Cricket Info







