ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು

ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು
ಮಡಿಕೇರಿ: ಜಾರ್ಖಂಡ್ನ ರಾಂಚಿಯಲ್ಲಿ ಸೆಪ್ಟೆಂಬರ್ 10ರಿಂದ 12ರವರೆಗೆ ನಡೆಯಲಿರುವ CISCE Regional Hockey Championship 2026 ಕ್ರೀಡಾಕೂಟಕ್ಕೆ ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ನ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಶಾಲೆಯ ಆದ್ಯ ದೇಚಮ್ಮ ಅವರು ಸ್ಟ್ರೈಕರ್ ಆಗಿ, ಜಾಹ್ನವಿ ಎಂ.ಎ. ಅವರು ಫಾರ್ವರ್ಡ್ ಪ್ಲೇಯರ್ ಆಗಿ ಹಾಗೂ ಗ್ರಂಥ ಸೊಮ್ಮಣ್ಣ ಅವರು ಸ್ಟ್ಯಾಂಡ್ಬೈ ಪ್ಲೇಯರ್ ಆಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ವಿದ್ಯಾರ್ಥಿನಿಯರಿಗೆ ಶಾಲೆಯ ಕ್ರೀಡಾ ತರಬೇತುದಾರರಾದ ಹಂಚೆಟ್ಟಿರ ಈರಪ್ಪ ಹಾಗೂ ಕ್ರೀಡಾ ಶಿಕ್ಷಕಿ ಸೀಮಾ ಪರ್ವೀನ್ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಮೂವರು ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಕರ್ನಾಟಕ ಹಾಗೂ ಮಡಿಕೇರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.
ವರದಿಗಾರರು
ಜಾನ್ಸನ್ ಕೊಡಗು
Live Cricket Info





