Telegram Join our Telegram Channel for Daily Latest News Updates! Join Now ×

ಭಾರತದ ಷೇರುಪೇಟೆ ಭರ್ಜರಿ ಕುಸಿತ; 8 ಲಕ್ಷ ಕೋಟಿ ರೂ ನಷ್ಟ; ಶೇ 80 ಷೇರುಗಳಿಗೆ ಹಿನ್ನಡೆ

ಬೆಂಗಳೂರು (ನ್ಯೂಸ್ ಎನ್ ಕನ್ನಡ) : ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ (Stock Market) ಕರಡಿ ಕುಣಿತ ಮುಂದುವರಿದಿದೆ. ಇಂದು ಬಿಎಸ್​ಇ ಮತ್ತು ಎನ್​ಎಸ್​ಇಯ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ, ಸೆನ್ಸೆಕ್ಸ್ ಶೇ. 2ರವರೆಗೂ ಕುಸಿತ ಕಂಡಿವೆ. ಹೂಡಿಕೆದಾರರಿಗೆ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ.ಇರಾನ್ ಯುದ್ಧ ನಡೆಯುತ್ತಿರುವುದರಿಂದ ಷೇರು ಮಾರುಕಟ್ಟೆ ಕುಸಿತ ಅನಿರೀಕ್ಷಿತವೇನಲ್ಲ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಷೇರು ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 1,523 ಅಂಕ ಕಳೆದುಕೊಂಡು 78,711 ಮಟ್ಟ ಮುಟ್ಟಿತ್ತು. ಬುಧವಾರದ ಟ್ರೇಡಿಂಗ್​ನ ಒಂದು ಹಂತದಲ್ಲಿ ಸೆನ್ಸೆಕ್ಸ್ 78,528 ಅಂಕಗಳ ಮಟ್ಟದವರೆಗೆ ಕುಸಿದಿತ್ತು.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 506 ಅಂಕಗಳನ್ನು ತೊಡೆದುಕೊಂಡು 24,359 ಮಟ್ಟಕ್ಕೆ ಇಳಿದಿದೆ. ಒಂದು ಹಂತದಲ್ಲಿ ಇದು 24,325 ಅಂಕಗಳಿಗೆ ಇಳಿದಿತ್ತು. 50 ಸ್ಟಾಕ್​ಗಳ ಬುಟ್ಟಿಯಾದ ನಿಫ್ಟಿ, ಶೇ. 2ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಒಂದು ಅಂದಾಜು ಪ್ರಕಾರ ಭಾರತದ ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್​ಗಳೂ ಕೂಡ ಕುಸಿತ ಕಾಣುತ್ತಿವೆ. ಹೆಚ್ಚಿನ ಹೂಡಿಕೆದಾರರು ಈ ಇಟಿಎಫ್​ಗಳಿಂದ ಹೂಡಿಕೆ ಹಿಂಪಡೆಯುತ್ತಿರುವ ಟ್ರೆಂಡ್ ಇದೆ. ಭಾರತದ ಷೇರು ಪೇಟೆಯ ಭಯದ ಸೂಚಕವಾಗಿರುವ ವಿಐಎಕ್ಸ್ 20ರ ಮಟ್ಟ ದಾಟುತ್ತಿದೆ. ಇದು ಹೂಡಿಕೆದಾರರು ಆತಂಕದಲ್ಲಿರುವುದನ್ನು ಸೂಚಿಸುತ್ತದೆ.

ಷೇರು ಮಾರುಕಟ್ಟೆ ಕುಸಿಯುತ್ತಿರುವುದ್ಯಾಕೆ?

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಸಂಭವಿಸುತ್ತಿರುವುದು ಎಲ್ಲರನ್ನೂ ಚಿಂತಿತರನ್ನಾಗಿ ಮಾಡುತ್ತಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ತಡೆ ಎದುರಾಗಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿದೆ.

ಜಾಗತಿಕ ಮಾರುಕಟ್ಟೆಗಳು ಹಿನ್ನಡೆಯಲ್ಲಿವೆ. ಅದರಲ್ಲೂ ಏಷ್ಯನ್ ಸೂಚ್ಯಂಕಗಳು ತೀವ್ರ ಒತ್ತಡದಲ್ಲಿವೆ. ಇದು ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿರಬಹುದು.ಡಾಲರ್ ಎದುರು ರುಪಾಯಿ ಮೌಲ್ಯ ಹೊಸ ದಾಖಲೆ ಮಟ್ಟಕ್ಕೆ ಕುಸಿದಿದೆ.

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo

Live Cricket Info

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.