Telegram Join our Telegram Channel for Daily Latest News Updates! Join Now ×

ಖಮೇನಿ ಬೇಟೆಗಾಗಿ ಇರಾನ್‌ನಲ್ಲಿನ ಟ್ರಾಫಿಕ್‌ ಕ್ಯಾಮೆರಾಗಳನ್ನೇ ಹ್ಯಾಕ್‌ ಮಾಡಿತ್ತು ಇಸ್ರೇಲ್‌!

ಇಸ್ರೇಲ್(ನ್ಯೂಸ್ ಎನ್ ಕನ್ನಡ ): ಶತ್ರುವಿನ ಮೇಲೆ ದಾಳಿ, ಗೂಢಚರ ಕೆಲಸಕ್ಕೆ ವಿಶ್ವದಲ್ಲೇ ಅತ್ಯಂತ ಖ್ಯಾತಿ ಹೊಂದಿರುವ ಇಸ್ರೇಲ್‌, ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಬೇಟೆಗಾಗಿ ಇರಾನ್‌ ರಾಜಧಾನಿ ಟೆಹ್ರಾನ್‌ನ ಟ್ರಾಫಿಕ್‌ ಕ್ಯಾಮೆರಾಗಳನ್ನೇ ಹ್ಯಾಕ್‌ ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ಇರಾನ್‌ ಮೇಲೆ ದಾಳಿ ನಡೆಸುವ ಮುನ್ನ ‘ಬಡಾ ಸಾಬ್‌’ ಎಂಬ ಮೊಬೈಲ್‌ ಆಯಪ್‌ ಹ್ಯಾಕ್‌ ಮಾಡಿ ಶಿಯಾ ಮುಸ್ಲಿಮರನ್ನೇ ಸರ್ಕಾರದ ವಿರುದ್ಧ ದಂಗೆ ಏಳಲು ಪ್ರಚೋದಿಸಿದ ವಿಷಯದ ಬೆಳಕಿಗೆ ಬಂದಲ್ಲೇ ಇಸ್ರೇಲ್‌ನ ಮತ್ತೊಂದು ಸೈಬರ್‌ ಅಸ್ತ್ರ ಇಡೀ ವಿಶ್ವವನ್ನು ದಂಗುಬಡಿಸಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಅಧಿಕಾರಿಗಳ ಮೂಲಗಳನ್ನು ಆಧರಿಸಿ ಪತ್ರಿಕೆಯೊಂದು ಈ ಕುರಿತು ಸ್ಫೋಟಕ ವರದಿ ಪ್ರಕಟಿಸಿದೆ. ಟೆಹ್ರಾನ್‌ನ ಟ್ರಾಫಿಕ್‌ ಕ್ಯಾಮೆರಾಗಳನ್ನು ಒಂದು ವರ್ಷದಿಂದ ಹ್ಯಾಕ್‌ ಮಾಡಿದ್ದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಖಮೇನಿಯ ಬಾಡಿಗಾರ್ಡ್‌ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು ಎನ್ನಲಾಗಿದೆ.

WhatsApp Channel Join Now
Telegram Channel Join Now

ತಿರುಗುಬಾಣ:ತನ್ನ ವಿರೋಧಿಗಳು, ಪ್ರತಿಭಟನಾಕಾರರನ್ನು ಗುರುತಿಸಿ ದಮನಿಸಲು ಇರಾನ್‌ ಸರ್ಕಾರ ದೇಶಾದ್ಯಂತ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿತ್ತು. ಇತ್ತೀಚೆಗೆ ಇರಾನ್‌ನಾದ್ಯಂತ ನಡೆದಿದ್ದ ಪ್ರತಿಭಟನೆಯನ್ನು ಇದೇ ಕ್ಯಾಮೆರಾ ಬಳಸಿಕೊಂಡೇ ಮಟ್ಟಹಾಕಲಾಗಿತ್ತು. ಆದರೆ, ಅದೇ ಕ್ಯಾಮೆರಾಗಳನ್ನು ಬಳಸಿಕೊಂಡು ಇಸ್ರೇಲ್‌ ಕೂಡ ಇರಾನ್‌ನ ಉನ್ನತ ಅಧಿಕಾರಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.

ಈ ಕ್ಯಾಮೆರಾಗಳ ಮೇಲೆ ಕಳೆದ ವರ್ಷವೇ ಇಸ್ರೇಲ್‌ ನಿಯಂತ್ರಣ ಸಾಧಿಸಿತ್ತು. ಇವುಗಳಲ್ಲಿ ಒಂದು ಕ್ಯಾಮೆರಾವನ್ನು ಖಮೇನಿಯ ಭದ್ರತಾ ತಂಡ ಕಾರುಗಳನ್ನು ಪಾರ್ಕಿಂಗ್‌ ಮಾಡುವ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಈ ಕ್ಯಾಮೆರಾ ಬಳಸಿಕೊಂಡು ಖಮೇನಿಯ ಭದ್ರತಾ ಸಿಬ್ಬಂದಿ, ಅವರ ಹಿನ್ನೆಲೆ, ಅವರಿಗೆ ಯಾವ ಹೊಣೆಗಾರಿಕೆ ನೀಡಲಾಗಿತ್ತು ಎಂಬಿತ್ಯಾದಿ ವಿವರಗಳನ್ನು ಕಳೆದೊಂದು ವರ್ಷಗಳಿಂದ ಮೊಸಾದ್‌ ಗುಪ್ತವಾಗಿ ಸಂಗ್ರಹಿಸಿತ್ತು. ಭದ್ರತಾ ಸಿಬ್ಬಂದಿ ಕಚೇರಿ ಬಳಿ ಇದ್ದರೆ ಖಮೇನಿ ಇದ್ದಾರೆ ಎಂಬ ಸುಳಿವು ಪಡೆಯುವ ತಂತ್ರ ಇದಾಗಿತ್ತು.

ದಾಳಿಯ ದಿನವಾದ ಶನಿವಾರ ಇಸ್ರೇಲ್‌ ಮತ್ತು ಅಮೆರಿಕವು ಟೆಹರಾನ್‌ನ ಪಾಶ್ಚರ್‌ ಸ್ಟ್ರೀಟ್‌ನಲ್ಲಿ ಮೊಬೈಲ್‌ ನೆಟ್‌ವರ್ಕ್‌ ಅನ್ನು ಅಸ್ತವ್ಯಸ್ತಗೊಳಿಸಿತ್ತು. ಈ ಮೂಲಕ ದಾಳಿಯ ಸಣ್ಣ ಕುರುಹೇನಾದರೂ ಸೋರಿಕೆಯಾದರೂ ಖಮೇನಿ ಬಾಡಿಗಾರ್ಡ್‌ಗಳಿಗೆ ಆ ಕುರಿತ ಸಣ್ಣ ಮಾಹಿತಿಯೂ ತಲುಪಬಾರದಂತೆ ನೋಡಿಕೊಳ್ಳಲಾಗಿತ್ತು ಎಂದು ಮೂಲಗಳನ್ನು ಆಧರಿಸಿ ಹೇಳಲಾಗಿದೆ.

ಇನ್ನು ಇರಾನ್‌ ನಾಯಕರ ನಿತ್ಯದ ಚಲನವಲನಗಳ ಕುರಿತು ಸಂಗ್ರಹಿಸುತ್ತಿದ್ದ ಮಾಹಿತಿಗಳನ್ನು ಎಐ ಟೂಲ್ಸ್‌ ಮತ್ತು ಆಲ್ಗೋರಿದಂ ಬಳಸಿಕೊಂಡು ಪರಿಶೀಲಿಸಿ ನಂತರ ಹತ್ಯೆಯ ರೂಪುರೇಷೆ ಸಿದ್ಧಪಡಿಸಲಾಗಿತ್ತು ಎನ್ನಲಾಗಿದೆ.

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!

Was this article helpful?
YesNo

Live Cricket Info

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.