‘ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ’: Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ತೆಹರಾನ್(ನ್ಯೂಸ್ ಎನ್ ಕನ್ನಡ ): ಇರಾನ್ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೆನಿ ಸಾವಿಗೆ ದುಃಖ ವ್ಯಕ್ತಪಡಿಸುತ್ತಿರುವ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ವಿಚಿತ್ರ ಡ್ಯಾನ್ಸ್ ಮೂಲಕ ಲೇವಡಿ ಮಾಡುತ್ತಿದ್ದಾರೆ.
ಹೌದು.. ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೆನಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಭಾರತ ಮತ್ತು ಇರಾನ್ ಮಹಿಳೆಯರ ನಡುವೆ ಇದೀಗ ‘Digital war’ ಆರಂಭವಾಗಿದೆ.ಖಮೆನಿ ಸಾವಿಗೆ ಕಣ್ಣೀರು ಹಾಕಿದ್ದ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇರಾನ್ ನಲ್ಲಿ ಸಂಭ್ರಮ:
https://x.com/i/status/2028554539637629422
ಖಮೆನಿ ಹತ್ಯೆ ಬೆನ್ನಲ್ಲೇ ಇರಾನ್ ನಲ್ಲಿ ಲಕ್ಷಾಂತರ ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇರಾನಿಗೆ ಈಗ ಸ್ವಾತಂತ್ರ್ಯ ಸಿಕ್ಕಿತು ಎಂಬಂತೆ ಜಯಘೋಷ ಮೊಳಗಿಸಿದ್ದಾರೆ. ಬೀದಿಗಳಲ್ಲಿ ಖಮೇನಿ ಚಿತ್ರಗಳನ್ನು ಸುಟ್ಟು ತಮ್ಮ ದಶಕಗಳ ಅಜ್ಞಾತವಾಸಕ್ಕೆ ಬಿಡುಗಡೆ ಎಂಬಂತೆ ಜೋರು ದನಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
ದಶಕಗಳ ನರಕ:-
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಇರಾನ್ ಮಹಿಳೆಯರು ಖಮೆನಿ ಆಡಳಿತದ ಸಂದರ್ಭದಲ್ಲಿ ತಾವು ಅನುಭವಿಸಿದ ನೋವುಗಳನ್ನು ತೋಡಿಕೊಂಡಿದ್ದಾರೆ. ‘ನಾವು ದಶಕಗಳ ದಮನ ಅನುಭವಿಸಿದ್ದೇವೆ.
ಪ್ರಜಾಪ್ರಭುತ್ವ ದೇಶದಲ್ಲಿ ಕುಳಿತು ನಮ್ಮ ನೋವನ್ನು ತಳ್ಳಿಹಾಕಬೇಡಿ. ನೀವು ಇರಾನಿಯನ್ನರಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡಿರಿ.. ನಾವು ಅನುಭವಿಸಿದ ನೋವನ್ನು ತಮಾಷೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಅಂತೆಯೇ ಇರಾನ್ ನಲ್ಲಿ ಸರ್ವೋಚ್ಛ ನಾಯಕ ಖಮೆನಿ ಸಾವನ್ನು ಇರಾನ್ ನ ಒಂದು ಭಾಗ ಸಂಭ್ರಮಿಸುತ್ತಿದ್ದು ಪ್ರಮುಖವಾಗಿ ಬಹುತೇಕ ಇರಾನ್ ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಮಹಿಳೆಯರು ಹಿಜಾಬ್ ಸುಟ್ಟು ಸಂಭ್ರಮಿಸುವ ವಿಡಿಯೋಗಳು ವೈರಲ್ ಆಗುತ್ತಿದ್ದು, ಭಾರತೀಯ ಪತ್ರಕರ್ತೆಯರ ಪೋಸ್ಟ್‌ಗಳಿಗೆ ಈ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತಿದೆ.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo