ಆರ್ಸಿಬಿ ಫ್ಯಾನ್ಸ್ಗೆ ಡಬಲ್ ಗುಡ್ನ್ಯೂಸ್! 5 ಮ್ಯಾಚ್ ಮಾತ್ರವಲ್ಲ ಆ ಎರಡು ಮಹತ್ವದ ಪಂದ್ಯಗಳು ಇಲ್ಲೇ ನಡೆಯಲಿದೆ!

ಬೆಂಗಳೂರು (ನ್ಯೂಸ್ ಎನ್ ಕನ್ನಡ ): ಐಪಿಎಲ್ (IPL) ಶುರುವಾಗುವ ಮುಂಚೆ ಆರ್ಸಿಬಿ ಫ್ಯಾನ್ಸ್ಗೆ (RCB Fans) ಗುಡ್ನ್ಯೂಸ್ ಸಿಕ್ಕಿದೆ. ಹಾಲಿ ಚಾಂಪಿಯನ್ (Champion) ಆರ್ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಇದೀಗ ಎಲ್ಲಾ ಊಹಪೋಹಗಳಿಗೆ ತೆರೆ ಬಿದ್ದಿದೆ.
ಚಿನ್ನಸ್ವಾಮಿಯಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯಇನ್ನು, ಈ ಬಗ್ಗೆ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾಹಿತಿ ನೀಡಿದರು. ಈ ಬಾರಿ ಆರ್ಸಿಬಿ ಕಪ್ ಗೆದ್ದಿದೆ, ಸಂಪ್ರದಾಯದ ಪ್ರಕಾರ ಗೆದ್ದ ತಂಡ ಹೋಮ್ ಗ್ರೌಂಡ್ನಲ್ಲಿ ಉದ್ಘಾಟನಾ ಪಂದ್ಯ ಜರುಗಲಿದೆ. ಅದರ ಜೊತೆಗೆ ಫೈನಲ್ ಮ್ಯಾಚ್ ಕೂಡ ಇಲ್ಲೇ ಆಡಿಸಲಾಗುತ್ತದೆ. ಏಳು ಮ್ಯಾಚ್ನಲ್ಲಿ 2 ಪಂದ್ಯವನ್ನು ಆರ್ಸಿಬಿ ರಾಯಪುರ್ನಲ್ಲಿ ಆಡಲಿದೆ. ಉಳಿದ ಐದು ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ಹೇಳಿದರು.
ಸರ್ಕಾರಕ್ಕೆ ಧನ್ಯವಾದ! ಇನ್ನು ಇದೇ ವೇಳೆ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮಾತನಾಡಿ, ಇಂದು ಆರ್ಸಿಬಿ ಜೊತೆಯೂ ನಾವು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಬೇಕಿತ್ತು, ಆರ್ಸಿಬಿ ಸಿಇಓ ಇಂದು ಬ್ಯುಸಿ ಇದ್ದ ಕಾರಣ ಅವರು ಇಂದು ಭಾಗಿಯಾಗಲು ಆಗಲಿಲ್ಲ, ಆರ್ಸಿಬಿ ಐದು ಮ್ಯಾಚ್ಗಳು ಇಲ್ಲೇ ನಡೆಯಲಿದೆ. ಉದ್ಘಾಟನಾ ಮ್ಯಾಚ್, ಒಂದು ಪ್ಲೇ ಆಫ್, ಫೈನಲ್ ಮ್ಯಾಚ್ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಕೃತಜ್ಞತೆಗಳು ಎಂದು ಹೇಳಿದರು.
ಕ್ರೀಡಾಭಿಮಾನಿಗಳ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ
ಮುಂದುವರೆದು ಮಾತನಾಡಿದ ಅವರು, ಕುನ್ನಾ ವರದಿ ಹಾಗೂ ಎಕ್ಸ್ಪರ್ಟ್ ಕಮಿಟಿ ಅಧ್ಯಕ್ಷ ಮಹೇಶ್ವರ ರಾವ್ ಸೂಚನೆಯಂತೆ ಕ್ರೀಡಾಂಗಣದಲ್ಲಿ ಬದಲಾವಣೆ ಮಾಡಲಾಗಿದೆ. ಕ್ರೀಡಾಭಿಮಾನಿಗಳ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ಮಾಡಲಿದೆ. ಅಭಿಮಾನಿಗಳು ಬರಲು ಬಿಎಂಟಿಸಿ, ಮೆಟ್ರೋ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಕೆಗೆ ಹೆಚ್ಚಿನ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo