Telegram Join our Telegram Channel for Daily Latest News Updates! Join Now ×

ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್‌ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್

ರಿಯಾದ್ (ನ್ಯೂಸ್ ಎನ್ ಕನ್ನಡ ) : ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಇರಾನ್ ಮೇಲಿನ ದಾಳಿ ಇದೀಗ ಮದ್ಯಪ್ರಾಚ್ಯ ದೇಶಗಳ ಆತಂಕ ಹೆಚ್ಚಿಸಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಾದ ಬೆನ್ನಲ್ಲೇ ಇರಾನ್ ಕೆರಳಿದೆ. ಇತ್ತ ದುಬೈ, ಅದುಧಾಬಿ, ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಮದ್ಯಪ್ರಾಚ್ಯ ದೇಶಗಳ ಅಮೆರಿಕ ಸೇನಾ ನೆಲೆ, ಅಮೆರಿಕ ಕಚೇರಿಗಳ ಮೇಲೆ ದಾಳಿಮಾಡುತ್ತಿದೆ

 

WhatsApp Channel Join Now
Telegram Channel Join Now

ಸೌದಿ ಅರೆಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ ನೆಡೆಸಿದೆ. ಈ ದಾಳಿಯಿಂದ ಸೌದಿ ಅರೆಬಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಜನ ಆತಂಕಗೊಂಡಿದ್ದಾರೆ. ರಿಯಾದ್‌ನಲ್ಲಿನ ದಾಳಿ ಬೆನ್ನಲ್ಲೇ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೋನಾಲ್ಡೋ ಸೌದ ಅರೆಬಿಯಾ ತೊರೆದಿದ್ದಾರೆ. ತಮ್ಮ 750 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮೂಲಕ ಸೌದಿ ತೊರೆದೆ ಯೂರೋಪ್ ಸೇರಿಕೊಂಡಿದ್ದಾರೆ.

 

ಕುಟುಂಬ ಸಮೇತ ಸೌದಿ ತೊರೆದೆ ಕ್ರಿಸ್ಟಿಯಾನೋ

 

ಕ್ರಿಸ್ಟಿಯಾನೋ ರೋನಾಲ್ಡೋ ತಮ್ಮ ಕುಟುಂಬ ಸಮೇತ ಸೌದಿ ಅರೆಬಿಯಾ ತೊರೆದಿದ್ದಾರೆ. ಇರಾನ್ ಪ್ರತಿದಾಳಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ ದೇಶದಲ್ಲಿ ಅಸುರಕ್ಷಿತ ಆತಂಕ ಸೃಷ್ಟಿಯಾಗಿದೆ. ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ ಎಂದೇ ಗುರುತಿಸಿಕೊಂಡಿದ್ದ ದುಬೈ ಸೇರಿದಂತೆ ಯುಎಇ ಮೇಲೆ ಸತತ ದಾಳಿ ನಡೆಯುತ್ತಿದೆ.

 

2023ರಿಂದ ಸೌದಿಯಲ್ಲಿ ರೋನಾಲ್ಡೋ ವಾಸ

 

41 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ 2023ರಿಂದ ಸೌದಿ ಅರೆಬಿಯಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಲ್ ನಾಸರ್ ಫುಟ್ಬಾಲ್ ಕ್ಲಬ್. 2023ರಲ್ಲಿ ರೋನಾಲ್ಡೋ ಅಲ್ ನಾಸರ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೌದಿ ಲೀಗ್‌ನಲ್ಲಿ ಆಡುತ್ತಿರುವ ಕಾರಣ ರೋನಾಲ್ಡೋ ಸೌದಿಯಲ್ಲೇ ಬೀಡು ಬಿಟ್ಟಿದ್ದಾರೆ. ಇದೀಗ ಅಲ್ ನಾಸರ್ ಕ್ಲಬ್‌ಗೆ ತಾತ್ಕಾಲಿಕ ಬ್ರೇಕ್ ನೀಡಿ ಯೂರೋಪ್‌ಗೆ ಹಾರಿದ್ದಾರೆ. ಈ ಬೆಳವಣಿಗೆಯು ಸೌದಿ ಪ್ರೊ ಲೀಗ್‌ನಲ್ಲಿ ಆಡುತ್ತಿರುವ ಅಂತರಾಷ್ಟ್ರೀಯ ಆಟಗಾರರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ. ರೊನಾಲ್ಡೊ ಮಾತ್ರವಲ್ಲದೆ, ಸಾದಿಯೊ ಮಾನೆ, ಜೋ ಫೆಲಿಕ್ಸ್ ಮತ್ತು ಕರೀಂ ಬೆಂಜೆಮಾ ಅವರಂತಹ ದಿಗ್ಗಜ ಆಟಗಾರರು ಕೂಡ ಸೌದಿ ಲೀಗ್‌ನಲ್ಲಿದ್ದಾರೆ.

 

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಫೆಬ್ರವರಿ 28 ರಂದು ರಿಯಾದ್‌ನಲ್ಲಿ ಹಲವು ಸ್ಫೋಟಗಳು ನಡೆದಿದ್ದವು. ಇರಾನ್, ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಘಟನೆಗಳ ನಂತರ ರೊನಾಲ್ಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

 

ರೋನಾಲ್ಡೋ ಸೌದಿ ಫುಟ್‌ಬಾಲ್‌ನ ಜಾಗತಿಕ ರಾಯಭಾರಿಯೂ ಹೌದು. ಇದೀಗ ಅವರು ತಮ್ಮ ಗಲ್ಫ್‌ಸ್ಟ್ರೀಮ್ G650 ಮಾಡೆಲ್‌ನ ಖಾಸಗಿ ಜೆಟ್‌ನಲ್ಲಿ ಸೌದಿ ಬಿಟ್ಟಿದ್ದಾರೆ. ಈ ಜೆಟ್‌ನ ಬೆಲೆ ಬರೋಬ್ಬರಿ 67 ಮಿಲಿಯನ್ ಪೌಂಡ್, ಅಂದರೆ ಸುಮಾರು 750 ಕೋಟಿ ರೂಪಾಯಿ. ‘ಹಾರುವ ಅರಮನೆ’ ಎಂದೇ ಖ್ಯಾತಿಯಾಗಿರುವ ಈ ಜೆಟ್, ವಿಶ್ವದ ಅತ್ಯಂತ ಐಷಾರಾಮಿ ಖಾಸಗಿ ವಿಮಾನಗಳಲ್ಲಿ ಒಂದು. ಇದರಲ್ಲಿ ಒಟ್ಟು 19 ಮಂದಿ ಪ್ರಯಾಣಿಸಬಹುದು. ತಡೆ ರಹಿತ 7,000 ಮೈಲಿಗಳಿಗಿಂತ ಹೆಚ್ಚು ದೂರ ಹಾರುವ ಸಾಮರ್ಥ್ಯ ಹೊಂದಿದೆ.

 

 

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!

Was this article helpful?
YesNo

Live Cricket Info

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.