ಭಾರತವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್ ಮೇಲೆಯೇ ಜನಾಂಗೀಯ ನಿಂದನೆ! ಛೇ ಇದೆಂಥಾ ಅವಮಾನ! ಕಾಂಗ್ರೆಸ್ ದೂರು

ಬೆಂಗಳೂರು(ನ್ಯೂಸ್ ಎನ್ ಕನ್ನಡ ):ಟಿ20 ವಿಶ್ವಕಪ್ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಭಾರತ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನ ಹೀರೋ, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ. ಈ ಬಗ್ಗೆ ಕೇರಳ ಕಾಂಗ್ರೆಸ್ ಘಟಕ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೂರು ನೀಡಿದೆ.ಸಂಜು ಸ್ಯಾಮ್ಸನ್ ಮೈಬಣ್ಣದ ಬಗ್ಗೆ ಅವಮಾನಕರ ಪೋಸ್ಟ್ ಮಾಡಿದೆ.
ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಈ ಪಂದ್ಯ ನಡೆದಿತ್ತು. ಸಂಜು 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಂದ್ಯ ಮುಗಿದ ಬೆನ್ನಲ್ಲೇ ‘X’ (ಹಿಂದಿನ ಟ್ವಿಟರ್) ನಲ್ಲಿ ವಿವಾದಾತ್ಮಕ ಪೋಸ್ಟ್ ಒಂದು ಕಾಣಿಸಿಕೊಂಡಿದೆ. ಸಂಜು ಫೋಟೋ ಹಾಕಿ, ‘ಕಪ್ಪು ಶಕ್ತಿಗಳನ್ನು ಸೋಲಿಸಲು ಕಪ್ಪು ಶಕ್ತಿಗಳಿಗೇ ಸಾಧ್ಯ, ಚೆನ್ನಾಗಿ ಆಡಿದ್ದೀಯಾ ಸಂಜು ಸ್ಯಾಮ್ಸನ್’ ಎಂದು ಬರೆಯಲಾಗಿತ್ತು. ಈ ಪೋಸ್ಟ್ ವೆಸ್ಟ್ ಇಂಡೀಸ್ ಆಟಗಾರರು ಮತ್ತು ಸಂಜು ಇಬ್ಬರನ್ನೂ ಗುರಿಯಾಗಿಸಿಕೊಂಡಿತ್ತು.
ಈ ಪೋಸ್ಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಜು ಅವರ ಮೈಬಣ್ಣವನ್ನು ನಿಂದಿಸುವ ಈ ಪೋಸ್ಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ‘X’ ಮೂಲಕವೇ ತಮ್ಮ ಆಕ್ರೋಶವನ್ನು ಹೊರಹಾಕಿದೆ.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo
Live Cricket Info