ಸೆಷನ್ಸ್ ಕೋರ್ಟ್ ಆದೇಶ ರದ್ದು, ಪವಿತ್ರಾ ಗೌಡಗೆ ಬಿಗ್ ಶಾಕ್!

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಪವಿತ್ರಾ ಗೌಡ (Pavithra Gowda) ಅವರು ಮನೆ ಊಟಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್ (Sessions Court) ಮನೆ ಊಟಕ್ಕೆ ಅನುಮತಿ ಕೂಡಾ ನೀಡಿತ್ತು. ಪ್ರಾಸಿಕ್ಯೂಷನ್ ಇದನ್ನು ಆಕ್ಷೇಪಿಸಿದ ನಂತರ ಹೈಕೋರ್ಟ್ ಈ ಸಂಭಂಧ ಈಗ ತೀರ್ಪು ನೀಡಿದೆ.
ಆರೋಪಿ ಪವಿತ್ರಗೌಡ ಮನೆಯೂಟದ ಭವಿಷ್ಯ ಇಂದು ನಿರ್ಧಾರವಾಗಲಿದೆ ಎನ್ನಲಾಗಿತ್ತು. ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠದಿಂದ ಇಂದು ಮಧ್ಯಾಹ್ನ 2:30ಕ್ಕೆ ಆದೇಶ ನೀಡಿಲಾಗುತ್ತದೆ ಎಂದು ಹೇಳಲಾಗಿತ್ತು.
ಸೆಷನ್ಸ್ ಕೋರ್ಟ್ ನಲ್ಲಿ ವಾರಕ್ಕೊಮ್ಮೆ ಮನೆಯೂಟ ಕೊಡಲು ಆದೇಶ ನೀಡಿತ್ತು. ಪವಿತ್ರಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಮನೆಯೂಟ ನೀಡಲು ಆದೇಶ ನೀಡಿತ್ತು. ಆದರೆ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್ ಗೆ ಹೋಗಿದ್ದರು.
ವಾದ ಪ್ರತಿವಾದ ನಡೆಸಿ ಇಂದು ಆದೇಶ ಕಾಯ್ದಿರಿಸಿರೋ ಹೈಕೋರ್ಟ್ ಮಧ್ಯಾಹ್ನ 2:30 ಕ್ಕೆ ಆದೇಶ ಪ್ರಕಟರಿಸಿದೆ. ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠದಿಂದ ಆದೇಶ ನೀಡಲಾಗಿದೆ. ಆದೇಶ ಓದುತ್ತಿರೋ ನ್ಯಾ. ನಾಗಪ್ರಸನ್ನ ಅವರು ಸೆಷನ್ಸ್ ಕೋರ್ಟ್ ಆದೇಶ ರದ್ದು ಪಡಿಸಿದ್ದಾರೆ.
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo