Telegram Join our Telegram Channel for Daily Latest News Updates! Join Now ×

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ 369 ವಾರ್ಡ್‌ ಮೀಸಲಾತಿ ಪ್ರಕಟ: 185 ಸ್ಥಾನ ಮಹಿಳೆಗೆ; SC, ST ಪಾಲು ಎಷ್ಟು

ಬೆಂಗಳೂರು(ನ್ಯೂಸ್ ಎನ್ ಕನ್ನಡ ): ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪ್ರಕಟಿಸಿ ರಾಜ್ಯ ಸರಕಾರ ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.

2011ರ ಜನಗಣತಿ ಆಧರಿಸಿ ಜನವರಿ 8 ರಂದು ವಾರ್ಡ್‌ವಾರು ಕರಡು ಮೀಸಲು ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಜನವರಿ 23 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಒಂದೂವರೆ ತಿಂಗಳು ತಡವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಜೂನ್‌ ಒಳಗೆ ಪಾಲಿಕೆ ಚುನಾವಣೆ

ರಾಜ್ಯ ಸರಕಾರ ಜೂನ್‌ ಅಂತ್ಯದೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಯಾವುದೇ ಅಡೆ, ತಡೆ ಎದುರಾಗದಿದ್ದರೆ ಆ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ. ಅಂತಿಮ ಮೀಸಲು ಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಚುನಾವಣೆ ಚಟುವಟಿಕೆ ಗರಿಗೆದರಲಿವೆ

ಮುಖ್ಯಾಂಶಗಳು ಮತ್ತು ಅಂಕಿ – ಅಂಶಗಳು

ಜಿಬಿಎ ಒಟ್ಟು ವಾರ್ಡ್‌ಗಳು: 369

ಮಹಿಳೆಯರಿಗೆ ಮೀಸಲು: 185 ವಾರ್ಡ್‌ಗಳು (ಶೇ. 50)

ಸಾಮಾನ್ಯ ವರ್ಗ: 192 ವಾರ್ಡ್‌ಗಳು

ಬಿಸಿಎ (ಹಿಂದುಳಿದ ವರ್ಗ ಅ) ವರ್ಗ: 97 ವಾರ್ಡ್‌ಗಳು

ಪರಿಶಿಷ್ಟ ಜಾತಿ (ಎಸ್‌ಸಿ): 43 ವಾರ್ಡ್‌ಗಳು

ಬಿಸಿಬಿ (ಹಿಂದುಳಿದ ವರ್ಗ ಬಿ) ವರ್ಗ: 24 ವಾರ್ಡ್‌ಗಳು

ಪರಿಶಿಷ್ಟ ಪಂಗಡ (ಎಸ್‌ಟಿ): 07 ವಾರ್ಡ್‌ಗಳು

ಬೆಂಗಳೂರು ದಕ್ಷಿಣ ಪಾಲಿಕೆ

ಒಟ್ಟು ವಾರ್ಡ್‌ಗಳು – 72 ವಾರ್ಡ್‌ಗಳು

ಎಸ್‌ಸಿ – 7 (ಮಹಿಳೆ 3)

ಎಸ್‌ಟಿ – 1

ಹಿಂದುಳಿದ ವರ್ಗಗಳು ಅ: 19 (ಮಹಿಳೆ 9)

ಹಿಂದುಳಿದ ವರ್ಗಗಳು ಬಿ: 5 (2 ಮಹಿಳೆ)

ಸಾಮಾನ್ಯ: 40 (20 ಮಹಿಳೆ)

ಬೆಂಗಳೂರು ಉತ್ತರ ನಗರ ಪಾಲಿಕೆ

ಒಟ್ಟು ವಾರ್ಡ್‌ಗಳು – 72 ವಾರ್ಡ್‌ಗಳು

ಎಸ್‌ಸಿ – 9 (ಮಹಿಳೆ 4)

ಎಸ್‌ಟಿ – 2 (ಮಹಿಳೆ 1)

ಹಿಂದುಳಿದ ವರ್ಗಗಳು ಅ: 19 (ಮಹಿಳೆ 9)

ಹಿಂದುಳಿದ ವರ್ಗಗಳು ಬಿ: 5 (2 ಮಹಿಳೆ)

ಸಾಮಾನ್ಯ: 37 (18 ಮಹಿಳೆ)

ಬೆಂಗಳೂರು ಕೇಂದ್ರ ನಗರ ಪಾಲಿಕೆ

ಒಟ್ಟು ವಾರ್ಡ್‌ಗಳು – 63 ವಾರ್ಡ್‌ಗಳು

ಎಸ್‌ಸಿ – 11 (ಮಹಿಳೆ 5)

ಎಸ್‌ಟಿ – 1

ಹಿಂದುಳಿದ ವರ್ಗಗಳು ಅ: 15 (ಮಹಿಳೆ 7)

ಹಿಂದುಳಿದ ವರ್ಗಗಳು ಬಿ: 4 (2 ಮಹಿಳೆ)

ಸಾಮಾನ್ಯ: 32 (16 ಮಹಿಳೆ)

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

ಒಟ್ಟು ವಾರ್ಡ್‌ಗಳು – 112 ವಾರ್ಡ್‌ಗಳು

ಎಸ್‌ಸಿ – 9 (ಮಹಿಳೆ 4)

ಎಸ್‌ಟಿ – 2 (ಮಹಿಳೆ 1)

ಹಿಂದುಳಿದ ವರ್ಗಗಳು ಅ: 30 (ಮಹಿಳೆ 15)

ಹಿಂದುಳಿದ ವರ್ಗಗಳು ಬಿ: 7 (3 ಮಹಿಳೆ)

ಸಾಮಾನ್ಯ: 64 (32 ಮಹಿಳೆ)

ಬೆಂಗಳೂರು ಪೂರ್ವ ನಗರ ಪಾಲಿಕೆ

ಒಟ್ಟು ವಾರ್ಡ್‌ಗಳು – 50 ವಾರ್ಡ್‌ಗಳು

ಎಸ್‌ಸಿ – 7 (ಮಹಿಳೆ 3)

ಎಸ್‌ಟಿ – 1

ಹಿಂದುಳಿದ ವರ್ಗಗಳು ಅ: 14 (ಮಹಿಳೆ 7)

ಹಿಂದುಳಿದ ವರ್ಗಗಳು ಬಿ: 3 (1 ಮಹಿಳೆ)

ಸಾಮಾನ್ಯ: 25 (12 ಮಹಿಳೆ)

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!

Was this article helpful?
YesNo

Live Cricket Info

WhatsApp Channel Join Now
Telegram Channel Join Now

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.