ಸುದ್ದಿ

ಮಂಗಳೂರು :ಮರದಿಂದ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಮೃತ ವ್ಯಕ್ತಿಯನ್ನು ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್ (35) ಎಂದು ಗುರುತಿಸಲಾಗಿದೆ. ಮಿಯಾರ್ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ ಇವರು ಮರದ ಗೆಲ್ಲು ತೆಗೆಯುತಿದ್ದ ವೇಳೆ ಮರದಲ್ಲೇ ಅಸ್ವಸ್ಥಗೊಂಡು ಕೆಳಗೆ ಬಿದಿದ್ದಾರೆ. ತಕ್ಷಣ ಅಲ್ಲಿದ್ದವರು ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅದರೆ ಆವೇಳೆಗೆ ಅವರು ಮೃತ ಪಟ್ಟಿದ್ದಾರೆ. ಮೃತರಿಗೆ ಮದುವೆಯಾಗಿದ್ದು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ತಂದೆ ತಾಯಿಯನ್ನು ಅಗಲಿದ್ದಾರೆ.ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆೆ.

Related Articles

Leave a Reply

Your email address will not be published. Required fields are marked *

Back to top button