ಸುದ್ದಿ
ಕೊಡಗು :ಕೊಡ್ಲಿಪೇಟೆ ಸೇಂಟ್ ಆನ್ಸ್ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಕೊಡ್ಲಿಪೇಟೆ: ಕೊಡ್ಲಿಪೇಟೆ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಯೋಗಾಸನಗಳನ್ನು ಮಾಡಿ ಯೋಗ ದಿನವನ್ನು ಆಚರಿಸಿದರು.
ಶಾಲೆಯ ಶಿಕ್ಷಕಿ ಸಿಸ್ಟರ್ ಪವಿತ್ರ ಮಾತನಾಡಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತ ಜನರು ಯೋಗದ ಮಹತ್ವವನ್ನು ಅರಿತು ಕೊಳ್ಳುತ್ತಾರೆ ಮತ್ತು ಯೋಗವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸು ಮತ್ತು ದೇಹ, ಚಿಂತನೆ ಮತ್ತು ವರ್ತನೆ ಹಾಗೂ ಸಂಯಮ ಮತ್ತು ಸಾಧನೆಗಳ ಏಕೀಕರಣವನ್ನು ಸಾಕಾರಗೊಳಿಸುತ್ತದೆ.
ವಿದ್ಯಾರ್ಥಿಗಳು ಯೋಗ , ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು
ಶಾಲೆಯು ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು.
ವರದಿಗಾರರು
ಫ್ರೆಡ್ಡಿ ಪಿಸಿ