₹300 ಪಾವತಿಗೆ 10 ಲಕ್ಷ ಪರಿಹಾರ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಚೆಕ್ ವಿತರಣೆ
ಕೊಡ್ಲಿಪೇಟೆ: ಅಪಘಾತದಲ್ಲಿ ಮೃತಪಟ್ಟ ಕೊಡ್ಲಿಪೇಟೆ ನಿವಾಸಿ ಪುಟ್ಟರಾಜ ಅವರ ಪತ್ನಿ ಶ್ರೀಮತಿ ರತಿ ಅವರಿಗೆ ಕೊಡ್ಲಿಪೇಟೆ ಕರ್ನಾಟಕ ಬ್ಯಾಂಕ್ ಶಾಖೆ ವತಿಯಿಂದ 10 ಲಕ್ಷ ರೂ. ವಿತರಣೆ ಮಾಡಲಾಯಿತು.
ಅಪಘಾತದಲ್ಲಿ ಮೃತ ಪುಟ್ಟರಾಜ ಕರ್ನಾಟಕ ಬ್ಯಾಂಕ್ ಕೊಡ್ಲಿಪೇಟೆ ಶಾಖೆಯಲ್ಲಿ ಖಾತೆ ಹೊಂದಿದ್ದು ಕೆ.ಬಿ.ಎಲ್.ಸುರಕ್ಷಾ ಪಾಲಿಸಿ ಯೋಜನೆಗೆ ನೋಂದಣಿಯಾಗಿದ್ದ ವಾರ್ಷಿಕ ಕೇವಲ 300 ರೂ. ಪ್ರೀಮಿಯಂ ಪಾವತಿಸಿದ್ದ ಪುಟ್ಟರಾಜ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಯೋಜನೆಯ ಮೌಲ್ಯ 10 ಲಕ್ಷ ರೂ. ಚೆಕ್ ಮೃತನ ಪತ್ನಿ ಶ್ರೀಮತಿ ರತಿ ಅವರಿಗೆ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿ ಮೈಸೂರು ಮುಖ್ಯ ವ್ಯವಸ್ಥಾಪಕರಾದ ಡಾ. ಅರುಣ್. ಟಿ ಆರ್ ಮುತ್ತು ಕ್ಲಸ್ಟರ್ ಹೆಡ್ ಜಯಾನಂದ ದೇವಾಡಿಗ ಅವರು ಹಸ್ತಾಂತರಿಸಿದರು.
ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮತ್ತು ಕ್ಲಸ್ಟರ್ ಹೆಡ್ ಜಯಾನಂದ ದೇವಾಡಿಗ ಅವರು ಮಾತನಾಡಿ, ‘ಅತಿ ಕಡಿಮೆ ಮೊತ್ತದ ವಿಮಾ ಕಂತನ್ನು ತೆಗೆದುಕೊಂಡು ₹10 ಲಕ್ಷ ಮೊತ್ತದ ವಿಮಾ ಹಣವನ್ನು ವಾರಸುದಾರರಿಗೆ ನೀಡುತ್ತಿರುವುದು ಕರ್ನಾಟಕ ಬ್ಯಾಂಕ್ ನ ಸಾರ್ಥಕ ಸೇವೆಯಾಗಿದೆ ಈ ತರ ವಿಮಾ ಪಾಲಿಸಿಗಳು ಇದೆ ಎಂದು ಮಧ್ಯಮವರ್ಗದವರು ಹಾಗೂ ಬಡ ಜನರಿಗೆ ಹೆಚ್ಚು ಗೊತ್ತಿಲ್ಲ ಬ್ಯಾಂಕುಗಳಲ್ಲಿ ಎಷ್ಟೋ ಸಾರಿ ಇದರ ಬಗ್ಗೆ ಅರಿವು ಕೊಟ್ಟರು ಸಹ ಹೆಚ್ಹು ನಾಗರಿಕರು ಸದುಪಯೋಗ ಪಡಿಸಿ ಕೊಂಡಿಲ್ಲ ಆದುದರಿಂದ ಈ ಚೆಕ್ ಅನ್ನು ಬಹಿರಂಗವಾಗಿ ಕೊಡುವ ಮೂಲಕ ಸಾರ್ವಜನಿಕರಿಗೆ ಒಂದು ಅರಿವು ಮೂಡಿಸುತ್ತಾ ಇದ್ದೇವೆ , ಕಡಿಮೆ ವಿಮಾಕಂತಿನಲ್ಲಿ 10 ಲಕ್ಷ ಹಣಕೊಡುವುದು ಕರ್ನಾಟಕ ಬ್ಯಾಂಕ್ ನಲ್ಲಿ ಮಾತ್ರ ಬೇರೆ ಬ್ಯಾಂಕುಗಳು ಅಥವಾ ಇನ್ಸೂರೆನ್ಸ್ ಕಂಪನಿಗಳು ಸಹ ಕೊಡುತ್ತಿಲ್ಲ ಹಾಗೂ ಈ ಹಣ ಮೃತರ ಕುಟುಂಬದ ಮುಂದಿನ ಜೀವನ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿ ಮೈಸೂರಿನ ಮುಖ್ಯ ವ್ಯವಸ್ಥಾಪಕರಾದ ಡಾ: ಅರುಣ್ ಟಿ ಆರ್ ಅವರು ಹಿರಿಯ ನಾಗರೀಕರಿಗಾಗಿ ನಮ್ಮ ಬ್ಯಾಂಕ್ ಕೆ ಬಿ ಎಲ್ ವೈಸ್ ಎಂಬ ವಿಶೇಷವಾದ ವಿಮಾ ಪಾಲಿಸಿ ಇದೆ ಹಿರಿಯ ನಾಗರಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ರೂಪಾಯಿ ಐದು ಸಾವಿರ ಅಥವಾ ಇಪ್ಪತೈದು ಸಾವಿರ ರೂಪಾಯಿಗಳು ಇಟ್ಟಿರುವುದಾದರೆ ಹೆಚ್ಹು ವಿಮಾ ಅನುಕೂಲಗಳು ಸಹ ಇದೆ ಆಅನೇಕ ತರದ ರೋಗ್ಯ ತಪಾಸಣೆ ಸಹ ಉಚಿತವಾಗಿ ಮಾಡಿಸಿ ಕೊಳ್ಳಬಹುದು ಇದನ್ನ ಹಿರಿಯ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು, ಕೊಡ್ಲಿಪೇಟೆ ಶಾಖೆ ವ್ಯವಸ್ಥಾಪಕ ರಾಜೇಶ್ ಬಿ, ಹಿರಿಯ ಗ್ರಾಹಕ ತಮ್ಮಯ್ಯ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗ ಹಾಜರಿದ್ದರು.
REPORTING
FREDDY PC