ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಸಂವಿಧಾನ ಶಿಲ್ಪಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡುವಂತೆ ಕೊಡಗುಜಿಲ್ಲಾ ಅಹಿಂದ ಸಂಘಟನೆ ವತಿಯಿಂದ ಮನವಿ
ಮಡಿಕೇರಿ :ಅಹಿಂದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಯಾನವನದಲ್ಲಿ (ಇಂದಿರಾ ಕ್ಯಾಂಟೀನ್ ಬಳಿಯಲ್ಲಿ) ಸಂವಿಧಾನ ಶಿಲ್ಪಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿ ( ಪ್ರತಿಮೆ ) ನಿರ್ಮಾಣ ಮಾಡುವಂತೆ ಹಾಗೂ ಇಂದಿರಾ ಕ್ಯಾಂಟೀನ್ ಬಳಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಭಾರತದ ದೇಶದ ಮಾಜಿ ಉಪ ಪ್ರಧಾನಿಗಳಾದ ಬಾಬು ಜಗಜೀವನ್ ರಾಮ್ ರವರ ಪುತ್ತಳಿ ನಿರ್ಮಾಣ ಮಾಡುವಂತೆ ಮನವಿ ಮಾಡಲಾಯಿತ್ತು ಈ ಸ್ಥಳದಲ್ಲಿ ಪಕ್ಷೇಪಣೆಗಳು ಏನಾದರು ಇದ್ದಲ್ಲಿ ಮಡಿಕೇರಿ ನಗರದ ಹೃದಯ ಭಾಗವಾದ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ಬಳಿ ಸವಿಧಾನ ಶಿಲ್ಪಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿ ಹಾಗೂ ಸಂವಿಧಾನ ಶಿಲ್ಪಿ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರಿನ ಗ್ರಂಥಾಲಯವನ್ನು ನಿರ್ಮಿಸುವಂತೆ ಅಹಿಂದ ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿ ನಗರಸಭಾ ಪೌರಯುಕ್ತರಾದ ರಮೇಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತ್ತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ರವಿಗೌಡ. ನಗರಸಭಾ ಸದಸ್ಯರಾದ ಬಶೀರ್ ಅಹಮದ್ . ಸಮಿತಿಯ ಪ್ರಮುಖರಾದ. ವಿನೋದ್ ಕುಮಾರ್. ಮುನೀರ್ ಮಾಚರ್ ಎಂ ಎ. ಜಹೀರ್. ಹರೀಶ್.ಹೆಚ್.ಜಿ ಹಾಗೂ ಇನ್ನು ಹಲವರು ಹಾಜರಿದ್ದರು.
ಜಾನ್ಸನ್ ಕೊಡಗು