ಬಿಬಿಎಂಪಿ ಕಳಪೆ ಕಾಮಗಾರಿಗೆ ಹಾರಿತು ಬಾಲಕನ ಜೀವ
ಬೆಂಗಳೂರು (ನ್ಯೂಸ್ ಎನ್ ಕನ್ನಡ ) : ಬಿಬಿಎಂಪಿ ಮೈದಾನದಲ್ಲಿ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ. ಗೇಟ್ ಬಿದ್ದು 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ .
ನಿರಂಜನ್ 10 ವರ್ಷದ ಬಾಲಕ, ಸೈಕಲ್ ಚೈನ್ ಹಾಕಿಸಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಬಾಲಕ ನಿರಂಜನ್ ಎಂದಿನಂತೆ ಆಟವಾಡಲು ಮೈದಾನಕೆ ತೆರಳಿದ್ದಾನೆ , ಗೇಟ್ ತೆಗೆದು ಒಳಹೋಗಲು ಹೊರಟ ಬಾಲಕನ ಮೇಲೆ ಗೇಟ್ ಬಿದ್ದಿದೆ , ಸ್ಥಳೀಯರ ಸಹಾಯದಿಂದ ಕೆ. ಸಿ ಜನರಲ್ ಹಾಸ್ಪಿಟಲ್ ಗೆ ಬಾಲಕನ ಕರೆದೊಯ್ದರು ಚಿಕಿತ್ಸೆ ಪಲಾಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಸ್ಥಳಕೆ ಮಲ್ಲೇಶ್ವರಂ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಹಳೆ ಗೇಟ್ ಗೆ ಬಣ್ಣಬಳಿದಿರುವುದಾಗಿ ಸ್ಥಳೀಯರು ಹೇಳಿದ್ದಾರೆ. 4ನೇ ಬಾರಿ ಬಿಬಿಎಂಪಿ ಕಾಮಗಾರಿ ಹೆಸರಲ್ಲಿ 30ಲಕ್ಷ ಬಿಡುಗಡೆ ಆಗಿತ್ತು.
ಬಿಬಿಎಂಪಿ ಹೀಗೆ ಅಕ್ರಮ ಮಾಡಿ ಕಳಪೆ ಕಾಮಗಾರಿ ನಡೆಸಿ ಎಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ. ಸದ್ಯಕ್ಕೆ ಯಾವ ಬಿಬಿಎಂಪಿ ಅಧಿಕಾರಿಯ ಇಲ್ಲ ಬಿಬಿಎಂಪಿ ಗುತ್ತಿಗೆದಾರರ ಮೇಲೆ ಇಲ್ಲಿವರೆಗೂ ಕ್ರಮವಾಗಿಲ್ಲ. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರೆ ಉತ್ತರ ನೀಡಬೇಕಿದೆ.