ಕೊಡಗಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಂದುಕ್ಕೂ ಲಂಚ?
ಕೊಡಗು:- ಇತ್ತೀಚೆಗೆ ಮಡಿಕೇರಿ ಮತ್ತು ಮೂರ್ನಾಡು ಭಾಗಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಕ್ಟರ್ ಗಳಿಂದ ಹಿಡಿದು ಕೆಳಗಿನ ಆಯಾ ಕೆಲಸದವರು ಕೂಡ ಬರುವ ಪೇಶಂಟ್ಗಳೊಂದಿಗೆ ಸಾವಿರಾರು ರೂಪಾಯಿ ಲಂಚ ಕೇಳುತ್ತಿರುವುದು ಕಂಡುಬಂದಿದ್ದು ಒಂದು ಹೆರಿಗೆಗೆ ರೂ.1,500 ಡಾಕ್ಟರ್ ಗಳಿಗೆ 1000 ರೂಪಾಯಿ ನರ್ಸ್ಗಳಿಗೆ ಐನೂರು ರೂಪಾಯಿ ಆಯ ಕೆಲಸದವರಿಗೆ ನೀಡಬೇಕೆಂದು ನೊಂದ ಮಹಿಳೆ ಮಾಧ್ಯಮಕ್ಕೆ ತಿಳಿಸಿದ್ದಾರೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಮತ್ತು ಮೂರ್ನಾಡು ಪ್ರಾಥಮಿಕ ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಂಥ ಡಾಕ್ಟರ್ ಗಳ ಮೇಲೆ ಕ್ರಮ ಜರುಗಿಸಬೇಕಾಗಿ ಕೇಳಿಕೊಂಡಿದ್ದಾರೆ ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಲೂಟಿ ಹೊಡೆಯುತ್ತಿರುವ ಕದೀಮ ಡಾಕ್ಟರ್ ಗಳಿಗೆ ಪಾಠವಾಗಬೇಕಾಗಿದೆ ಬಡತನದ ಬೇಗೆಯಲ್ಲಿ ಇರುವ ಅದೆಷ್ಟೋ ಜನರು ಈ ಕೊಡಗು ಜಿಲ್ಲೆಯಲ್ಲಿದ್ದಾರೆ ಸರಿಯಾದ ಆಂಬುಲೆನ್ಸ್ ಸೇವೆನೂ ಇಲ್ಲ, ಇಂತಹ ಕಷ್ಟಗಳ ಮಧ್ಯದಲ್ಲಿ ಡಾಕ್ಟರ್ ಗಳು ಉತ್ತಮ ಸೇವೆ ಸಲ್ಲಿಸುವ ಬದಲು ಮಾನವೀಯತೆ ಇಲ್ಲದೆ ನಡೆದುಕೊಳ್ಳುವಂತದ್ದು ಎಷ್ಟು ಸರಿ.
ಕೊಡಗಿನಲ್ಲಿ ಲಂಚದ ವಾಸನೆ