ಸುದ್ದಿ
ಕನ್ನಡ ಭಾಷೆಗೆ ಮಹತ್ವ ಕೊಟ್ಟ ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್
ವ್ಯಾಟಿಕನ್ : ಜಾಗತಿಕ ಕ್ರೈಸ್ತರಿಗೆ ಸುದ್ದಿ, ಸಂದೇಶ ಹಾಗೂ ಮಾಹಿತಿಗಳನ್ನು ನೀಡುವ ‘ವ್ಯಾಟಿಕನ್ ನ್ಯೂಸ್’ ವೆಬ್ ಪೋರ್ಟಲ್‌ನಲ್ಲಿ 53ನೇ ಭಾಷೆಯಾಗಿ ಕನ್ನಡವನ್ನು ಮಂಗಳವಾರದಿಂದ ಅಳವಡಿಸಿಕೊಳ್ಳಲಾಗಿದೆ. ಭಾರತೀಯ ಭಾಷೆಗಳಾದ ಹಿಂದಿ, ತಮಿಳು, ಮಲಯಾಳಂ ನಂತರ ಕನ್ನಡವೂ ಆ ಗೌರವವನ್ನು ಪಡೆದಿದೆ.
ರೋಮನ್ ಕ್ಯಾಥೋಲಿಕರ ಪರಮೋಚ್ಛ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನೀಡುವ ಸಂದೇಶಗಳನ್ನು ‘ವ್ಯಾಟಿಕನ್ ನ್ಯೂಸ್’ ಸುದ್ದಿ ಸಂಸ್ಥೆ ಕನ್ನಡದಲ್ಲಿ ಪ್ರಕಟಿಸಲು ಆರಂಭಿಸಿದೆ.
ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ಅವರ ಸಂವಹನದಿಂದಾಗಿ ಕನ್ನಡ ಭಾಷೆ ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ನಲ್ಲಿ ಮೂಡಿ ಬರುವಂತೆ ಆಗಿದೆ. ಕನ್ನಡದಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಆರ್ಚ್ ಬಿಷಪ್ ಅವರು ಈ ವಿಷಯವನ್ನು ಕರುನಾಡಿನ ಮುಂದಿಟ್ಟರು.