ಸುದ್ದಿ
ಇರಾಕ್ ನಲ್ಲಿ ಹೆಣ್ಣಿನ ಮದುವೆ ವಯಸ್ಸಿಗೆ 9 ಕ್ಕೆ ಇಳಿಸಲು ಮುಂದಾದ ಸರ್ಕಾರ
ಬಾಗ್ಧಾದ್: ಇರಾಕ್ ಸರಕಾರವು ಹೆಣ್ಣು ಮತ್ತು ಗಂಡು ಮಕ್ಕಳ ಮದುವೆ ವಯಸ್ಸು ಇಳಿಕೆ ಮಾಡುವ ಕಾನೂನು ಜಾರಿ ಮಾಡಲು ಹೊರಟಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಉದ್ದೇಶಿತ ಕಾಯ್ದೆಯ ಅನು ಸಾರ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9ಕ್ಕೆ ಮತ್ತು ಗಂಡು ಮಕ್ಕಳ ವಯಸ್ಸನ್ನು 15ಕ್ಕೆ ಇಳಿಕೆ ಮಾಡಲಾಗುತ್ತಿದೆ.
ಇದೇ ವೇಳೆ, ವಾರಸುದಾರಿಕೆ, ಮಕ್ಕಳ ಪಾಲನೆ ಮತ್ತು ವಿಚ್ಛೇದನ ಸೇರಿ ಕೌಟುಂಬಿಕ ವ್ಯಾಜ್ಯಗಳನ್ನು ಬಗೆಹರಿಸಲು ನಾಗರಿಕರು ಧಾರ್ಮಿಕ ಗುರುಗಳು ಅಥವಾ ನಾಗರಿಕ ನ್ಯಾಯಾಂಗ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಿದೆ. ಈ ಕರಡು ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.