ಇನ್ಮುಂದೆ ಲೈಸೆನ್ಸ್ ಇಲ್ಲದೇ ಸಿಗರೇಟ್, ಗುಟ್ಕ ಮಾರಾಟ ಮಾಡೋಹಾಗಿಲ್ಲ: ಬಿಬಿಎಂಪಿ ಖಡಕ್ ವಾರ್ನಿಂಗ್!
Bengaluru: ಆಧುನಿಕ ಯುಗದಲ್ಲಿ ಯುವ ಜನತೆ ತಂಬಾಕು ಉತ್ಪನ್ನಗಳ ಸೇವಿಸಿ ಹಾದಿತಪ್ಪುತ್ತಿರುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇರುವ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಗ್ ಶಾಕ್ (Big Shock) ನೀಡಲು ಮುಂದಾಗಿದೆ.
ಈಗಾಗಲೇ ನಗರದಲ್ಲಿ ಇರುವ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಗೂಡಂಗಡಿ ವ್ಯಾಪಾರಿಗಳಿಗೆ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದ್ದು, ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳಿಗೆ ಪ್ರತ್ಯೇಕ ಲೈಸೆನ್ಸ್ (License) ಜಾರಿ ಮಾಡಲು ಪಾಲಿಕೆ ಮುಂದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಪರವಾನಗಿ ಕಡ್ಡಾಯವಾಗಲಿದ್ದು, ಪಾಲಿಕೆಯಿಂದ ಹೊಸ ರೂಲ್ಸ್ (New Rules) ಜಾರಿಗೆ ಈಗಾಗಲೇ ಭರದ ಸಿದ್ಧತೆ ನಡೆದಿದೆ
ವರ್ಷಕ್ಕೆ 500ರೂ ಹಣ ಪಾವತಿ ಮಾಡಿ ಲೈಸೆನ್ಸ್ ಪಡೆಯಬೇಕು. ಈಗಾಗಲೇ ನಗರದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಸಣ್ಣ ಪುಟ್ಟ ಅಂಗಡಿಗಳು ಲೈಸನ್ಸ್ ಇಲ್ಲದೇ ಸಿಗರೇಟ್, ಗುಟ್ಕ ಮಾರಾಟ ಮಾಡುತ್ತಿವೆ. ಒಂದು ವೇಳೆ ಲೈಸೆನ್ಸ್ ಇಲ್ಲದೇ ಸಿಗರೇಟ್, ಗುಟ್ಕ ಮಾರಾಟ ಮಾಡಿದ್ರೆ ಮೊದಲ ಬಾರಿಗೆ 5 ಸಾವಿರ ದಂಡ ವಿಧಿಸಲಾಗುತ್ತದೆ. ನಂತರದಲ್ಲಿ ಪ್ರತಿದಿನ 100 ರೂ ದಂಡ ವಿಧಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
ಸೆಪ್ಟೆಂಬರ್ ಮೊದಲ ವಾರದಿಂದ ಈ ರೂಲ್ಸ್ ಜಾರಿಗೆ ಬಿಬಿಎಂಪಿ (BBMP) ಸಿದ್ಧತೆ ಮಾಡಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ವಿಕಾಸ್ ಕಿಶೋರ್ (Vikas Kishore) ಅವರು ತಿಳಿಸಿದ್ದಾರೆ.