Post
N/APublish
Change block type or style
Change text alignment
Displays more block tools
ಶನಿವಾರಸಂತೆ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ
ಶನಿವಾರಸಂತೆ: ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಈ ದಿನ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃತ್ತ ನಿರೀಕ್ಷಕರಾದ ಜಿ. ಕೃಷ್ಣ ರಾಜು ರವರ ಮುಂದಾಳತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶನಿವಾರಸಂತೆ ವೃತ್ತ ನಿರೀಕ್ಷಕರಾದ ಜಿ. ಕೃಷ್ಣರಾಜು
ಮತ್ತು ಸಿಬ್ಬಂದಿಗಳು ನಗರದ ವಾರ್ಡ್ ಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು.
ವಾರ್ಡ್ 1 ಹಾಗೂ 2 ರಸ್ತೆಯ ಮನೆಗಳಿಗೆ ಪೊಲೀಸ್ ಸಿಬ್ಬಂದಿಗಳು ತೆರಳಿ ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮತ್ತು ವಲಸೆ ಕೂಲಿ ಕಾರ್ಮಿಕಕರ ಮಾಹಿತಿಯ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.
ಮನೆಯಲ್ಲಿರುವವರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಲಾಯಿತು.
ಶನಿವಾರಸಂತೆ ಪೊಲೀಸ್ಠಾಣಾಧಿಕಾರಿ ಜಿ. ಕೃಷ್ಣರಾಜು ರವರು ಮತ್ತು ಪಿ ಎಸ್ ಐ ಚಂದ್ರ.
ಬೀಟ್ ವ್ಯಾಪ್ತಿಯ ಸದಸ್ಯರು. ಮತ್ತು ಸಿಬ್ಬಂದಿಗಳು ಅಭಿಯಾನವನ್ನು ಮುನ್ನಡೆಸಿದರು.
ಫ್ರೆಡ್ಡಿ PC
ವರದಿಗಾರರು