ಕೊಡಗು : ಕಲಿಕಾ ಹಬ್ಬ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿ..
ಕೊಡ್ಲಿಪೇಟೆ: ಕೊಡ್ಲಿಪೇಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಸರ್ಕಾರಿ ಉರ್ದು ಪ್ರಾಥಮಿಕ ಹಿರಿಯ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮತಿ ನಸಿಬಾ ಅವರ ಅಧ್ಯಕ್ಷತೆಯಲ್ಲಿ ಶ್ರೀ ಶ್ರೀ ಶ್ರೀ ಸದಾಶಿವಸ್ವಾಮೀಜಿಯವರು ಉದ್ಘಾಟನೆ ನೆರವೇರಿಸಿ ಮಾತನಾಡಿ ಮಕ್ಕಳಿಗೆ ಪ್ರಶ್ನೆ ಮಾಡುವ, ವೈಜ್ಞಾನಿಕ ಮನೋಭಾವ ವೃದ್ಧಿಯ ಜತೆಗೆ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಲಾಗಿದೆ. ಮಕ್ಕಳು ಇದರ ಪೂರ್ಣ ಲಾಭಪಡೆಯಬೇಕು’ ಎಂದು ಹೇಳಿ ಮಕ್ಕಳನ್ನು ಆಶೀರ್ವದಿಸಿದರು ,ನಂತರ ಅತಿಥಿಯಾಗಿ ಆಗಮಿಸಿದ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ ಮತನಾಡಿ ಕಲಿಕೆ ಎನ್ನುವುದು ನಿರಂತರತೆಯ ಗುಣ ಹೊಂದಿದೆ. ಇದು ವೃತ್ತಿ, ಜ್ಞಾನ, ಸೇರಿದಂತೆ ಮಾನವ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಣದ ಜತೆಗೆ ಇನ್ನಿತ್ತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.ಈ ಕಲಿಕಾ ಹಬ್ಬದಲ್ಲಿ 7 ವಿವಿಧ ರೀತಿಯ ಚಟುವಟಿಕೆಗಳಾದ ಗಟ್ಟಿ ಓದು,ಕಥೆ ಹೇಳುವುದು,ಕೈ ಬರಹ ಮತ್ತು ಕ್ಯಾಲಿಗ್ರಫಿ,ಸಂತೋಷದಾಯಕ ಗಣಿತ,ಟ್ರಿಷರ್ ಹಂಟ್ / ಮೆಮೊರಿ ಪರೀಕ್ಷೆ,ರಸ ಪ್ರಶ್ನೆ,
ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ ಚಟುವಟಿಕೆಗಳಿದ್ದವು, ಪೋಷಕರುಗಳು ಸಹ ಭಾಗವಹಿಸಿದ್ದರು
‘ಈ ಕಲಿಕಾ ಹಬ್ಬಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕ್ಲಸ್ಟರ್ ವಲಯದ ಒಂಬತ್ತು ಸರ್ಕಾರಿ ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು, ಕಾರ್ಯಕ್ರಮವನ್ನು ಮೊಹಮದ್ ಫಯಾಜ್ ನಿರೂಪಿಸಿ ಮುಜಾಮಿಲ್ ಅಖ್ತರ್ ಸ್ವಾಗತ ಕೋರಿದರು ಹಾಗೂ ಬೆಂಬಳೂರು ಶಾಲೆಯ ಮುಖ್ಯ ಶಿಕ್ಷಕರಾದ ಡಿ ಎಲ್ ಮೂರ್ತಿಯವರು ವಂದನಾರ್ಪಣೆ ಸಲ್ಲಿಸಿದರು ಈ ಸಂದರ್ಬದಲ್ಲಿಕೊಡ್ಲಿಪೇಟೆ ಸಂಪನ್ಮೂಲ ವ್ಯಕ್ತಿ ರವೀಶ್ ಬೆಸೂರು ಸಂಪನ್ಮೂಲ ವ್ಯಕ್ತಿ ಮುರುಳಿದರ್ ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ಬೆಸೂರು ಕ್ಲಸ್ಟರ್ ಮಟ್ಟದ ಶಿಕ್ಷಕರು, ಕೊಡ್ಲಿಪೇಟೆ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಯ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸೋಮುವಾರಪೇಟೆ ತಾಲ್ಲೂಕು ನಿರ್ದೇಶಕರಾದ ಜೆ ಡಿ ಸುರೇಶ್ ಉಪಸ್ಥಿತರಿದ್ದರು