ಸುದ್ದಿ

ಕೊಡಗು ಬಂದ್ ವೀರ ಸೇನಾನಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ?

ಕೊಡಗು ಬಂದ್

ಕೊಡಗು :ಭಾರತ ದೇಶ ಕಂಡ ಶ್ರೇಷ್ಠ ಸೇನಾನಿಗಳಾಗಿರುವ, ಫೀ.ಮಾ ಕೆ.ಎಂ.ಕಾರ್ಯಪ್ಪ ಹಾಗು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಂದು ಕರೆ ನೀಡಲಾಗಿರುವ ಕೊಡಗು ಬಂದ್ ಸುಮಾರು 20 ಕ್ಕಿಂತ ಹೆಚ್ಚು ಸಂಘ ಸಂಸ್ಥೆ ಗಳು ಜಿಲ್ಲೆಯಲ್ಲಿ ವಯಕ್ತಿಕ ಬೆಂಬಲ ನೀಡಿದ್ದು ಆರೋಪಿ ವಕೀಲ ವಿಧ್ಯಧರ್ ನಡೆಯನ್ನು ತೀವ್ರವಾಗಿ ಖಂಡಿಸಿದರು.

ವೀರಸೇನಾನಿಗಳು ಸೇರಿದಂತೆ ಯಾರನ್ನೂ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವುದು ಖಂಡನೀಯ ಎಂಬುದಾಗಿ ಅನೇಕ ಸಂಘ ಸಂಸ್ಥೆ ಯ ಮುಖಂಡರು ಕಿಡಿ ಕಾರಿದರು

ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಕೃಷ್ಣ ಗಣಪತಿಯವರು ಮಾತನಾಡಿ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ರವರು ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇವರುಗಳನ್ನು ಅವಹೇಳನ ಮಾಡಿರುವುದು ನೀಚತನದ ಪರಮಾವಧಿಯಾಗಿದೆಯೆಂದು ತಿಳಿಸಿದರು ಬಾಳೆಲೆ ಗ್ರಾಮಪಂಚಾಯತಿ ಅಧ್ಯಕ್ಷರಾದ ಮುಕ್ಕಾಟಿರ ಜಾನಕಿ, ಸದಸ್ಯರಾದ ಪೊಡಮಾಡ ಸುಕೇಶ್ ಭೀಮಯ್ಯ, ಅಡೇಂಗಡ ನವೀನ್, ಕಳ್ಳಿಚಂಡ ಕುಶಾಲಪ್ಪ, ನಿಟ್ಟೂರು ಗ್ರಾಮಪಂಚಾಯತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪ್ರಮುಖರಾದ ಅಡ್ಡೇಂಗಡ ರಾಖಿ, ಮೇಚಂಡ ಸೋಮಯ್ಯ, ಮುಂತಾದವರು ಹಾಜರಿದ್ದರು.

ಮಡಿಕೇರಿಯಲ್ಲೂ ಶಾಂತಿಯುತ ವಾಗಿ ಅಂಗಡಿ ಮುಂಗಟ್ಟು ಗಳು ಮುಚ್ಚುವುದರ ಮೂಲಕ ಬಂದ್ ಗೆ ಸಹಕಾರ ನೀಡಲಾಯಿತು

ಜಿಲ್ಲಾ ವರದಿಗಾರರು

ಜಾನ್ಸನ್ ಕೊಡಗು

Related Articles

Leave a Reply

Your email address will not be published. Required fields are marked *

Back to top button