ಮಂಗಳೂರು : ರಸ್ತೆ ಕಾಂಕ್ರೀಟಿಕರಣ ಗೊಳಿಸುವಂತೆ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಗೆ ಮನವಿ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಗಂಡಿಬಾಗಿಲು ಆಗಂಬಡಿ -ನೆರಿಯಕಾಡು ರಸ್ತೆ ಮತ್ತು ಗಂಡಿಬಾಗಿಲು ಕೇರಿಮಾರ್ -ಇಂದಿರಾನಗರ ರಸ್ತೆ ಗಳ ಕಾಂಕ್ರೀಟಿಕರಣ ಮಾಡಿ ಅಭಿವೃದ್ಧಿ ಪಡಿಸುವ ಬೇಡಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ,ರಕ್ಷಿತ್ ಶಿವರಾಮ್ ರನ್ನು ಮತ್ತು ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ.ನಾಗೇಶ್ ರನ್ನು ಆ ಪ್ರದೇಶದ ಜನ ನಿವಾಸಿಗಳು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಬೇಡಿಕೆಯನ್ನು ಈಡೇರಿಸಿ ಕೊಡುವ ಭರವಸೆಯನ್ನು ರಕ್ಷಿತ್ ಶಿವರಾಮ್. ರವರು ನೀಡಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ನಮಿತಾ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿ. ಟಿ. ಸಭಾಸ್ಟಿಯನ್. ನೆರಿಯ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಸಭಾಸ್ಟಿಯನ್. ಎಂ. ಜೆ. ನೆರಿಯ ಗ್ರಾಮ ಬೂತ್ 85ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತೋಮಸ್ ಪಿ. ಪಿ. ಜೊತೆಗಿದ್ದರು.