ಕೊಡಗು :-ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕೊಡ್ಲಿಪೇಟೆ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಂಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳನ್ನ ಕಲಿಕೆಯಲ್ಲಿ ಪ್ರೋತ್ಸಾಹಿಸ ಬೇಕೆಂದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಿ ಕೆ ದಿನೇಶ್ ಕುಮಾರ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಶಾಲೆಯ ವಿದ್ಯಾರ್ಥಿ ಆಚಂತ್ಯ ಪ್ರಾರ್ಥನೆ ಸಲ್ಲಿಸಿದರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಡಿ ಎಲ್ ಮೂರ್ತಿಯವರು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಶ್ರೀ ಬಿ ಕೆ ದಿನೇಶ್ ಕುಮಾರ್ ಅವರು ಜನಪ್ರತಿನಿಧಿಗಳಿಗೆ ಒಂದು ಮಾದರಿಯಾಗಿದ್ದಾರೆ ಏಕೆಂದರೆ ದಿನೇಶ್ ಕುಮಾರ್ ಅವರು ಗ್ರಾಮ ಪಂಚಾಯಿತಿಯಿಂದ ತಮಗೆ ಬರುವ ಗೌರವ ಧನವನ್ನ ಶಾಲೆಗಾಗಿ ಮೀಸಲಿಟ್ಟಿದ್ದು ಮತ್ತು ಹದಿನೈದು ಸಾವಿರ ರೂಪಾಯಿಗಳನ್ನು ಶಾಲೆಯ ಹೆಸರಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟು ಅದರಲ್ಲಿ ಬರುವ ಬಡ್ಡಿ ಹಣದಿಂದ ಶಾಲೆಯ ಉತ್ತಮ ವಿದ್ಯಾರ್ಥಿಗಳಿಗೆ ಕೊಡಲು ಸೂಚಿಸಿರುತ್ತಾರೆ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿ ಶಾಲೆಯ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು
ಎಂ ಡಿ ಹೂರ್ ಭಾನು ಅವರು ಎಲ್ಲರನ್ನೂ ಸ್ವಾಗತಿಸಿದರು, ಶಾಲೆಯ ಸಹ ಶಿಕ್ಷಕಿ ಕುಸುಮ ವಂದನಾರ್ಪಣೆ ಸಲ್ಲಿಸಿದರು
ಗ್ರಾಮ ಪಂಚಾಯಿತಿಯ ಸದಸ್ಯರಾದ ದೊಡ್ಡಯ , ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಹಾಗೂ ಗ್ರಮದ ಹಿರಿಯರಾದ ಜಯಪ್ಪ , ಮೊಗಣಯ್ಯ ಬಿ. ಕೆ ಮಂಜುನಾಥ್ , ಅರುಣ್ ಕುಮಾರ್ ಹಾಗೂ ಜೀವನ್ ಉಪಸ್ಥಿತರಿದ್ದರು
ತಾಲ್ಲೂಕು ವರದಿಗಾರರು
ಫ್ರೆಡ್ಡಿ PC