ಕೊಡ್ಲಿಪೇಟೆ ಗ್ರಾಮ ಪಂಚಾಯತ್ ನಲ್ಲಿ ಅರ್ಥ ಪೂರ್ಣ ಕಾರ್ಮಿಕ ದಿನಾಚರಣೆ
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ನೌಕರವರ್ಗದವರು ಗ್ರಾಮ ಪಂಚಾಯಿತಿಕಚೇರಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆಮುಖ್ಯ ಅತಿಥಿಯಾಗಿ ಆಗಮಿಸಿದ ಸೋಲಿಲ್ಲದ ಸರದಾರ ಪಂಚಾಯ್ತಿಯ ಹಿರಿಯ ಹಾಗೂ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದಂತಹ ಶ್ರೀ ಕೆ ಆರ್ ಚಂದ್ರಶೇಖರ್ ರವರು ಉದ್ಘಾಟನೆಯನ್ನು ಮಾಡಿ ದೀಪವನ್ನು ಬೆಳಗಿಸಿದರು ನಂತರ ತಮ್ಮ ಭಾಷಣದಲ್ಲಿ ಇವತ್ತು ರೈತ ದೇಶದ ಬೆನ್ನೆಲುಬು ಅಂತಾರೆ ಅದೇ ರೀತಿ ಕಾರ್ಮಿಕರು ಸಹ ದೇಶದ ಬೆನ್ನೆಲುಬಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳು ಬಂದು ಕಾರ್ಮಿಕರು ನಿರುದ್ಯೋಗ ಕಾಡುತ್ತಿತ್ತು ಈ ಸಂದರ್ಭದಲ್ಲಿಘನ ಸರ್ಕಾರವು ಉದ್ಯೋಗ ಕಾತ್ರಿ ಅಡಿಯಲ್ಲಿ ದಿನ ನಿತ್ಯ ಇಷ್ಟು ಕೂಲಿಯನ್ನು ನಿಗದಿ ಮಾಡಿ ಕೊಡುತ್ತಿರುವುದು ಸಂತೋಷದ ವಿಷಯ ಇವತ್ತು ಕಟ್ಟಡ ಕಟ್ಟಲು ಕಾರ್ಮಿಕರು ಬೇಕು ಪಟ್ಟಣ ಸ್ವಚ್ಛ ಮಾಡಲು, ನೀರು ಬಿಡಲು ಕಾರ್ಮಿಕರು ಬೇಕು ಎನ್ನುವುದು ಜನ ಮನಗಂಡಿದ್ದಾರೆ ಈ ದಿನ ವನ್ನು ಕಾರ್ಮಿಕರ ದಿನಾಚರಣೆ ಆಚಾರರಿಸುವುದು ಸಂತೋಷದ ವಿಷಯ ಎಂದೂ ಗ್ರಾಮ ಪಂಚಾಯಿತಿಯ ಕಾರ್ಮಿಕರ ಉದ್ದೇಶಿಸಿ ಮಾತನಾಡಿದರು ,ಹಾಗೂ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗೇಶ್ , ನೌಕರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನೌಕರವರ್ಗದವರು ಎಲ್ಲರೂ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ನಂತರ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು
ವರದಿ:ಫ್ರೆಡ್ಡಿ ಕೊಡ್ಲಿಪೇಟೆ