ಬೆಂಗಳೂರಲ್ಲಿ ಜೈ ಶ್ರೀ ರಾಮ್ ಎಂದು ಕೂಗಿದ್ದಕ್ಕೆ ಹಲ್ಲೆ
ಬೆಂಗಳೂರು: ರಾಮನವಮಿ (Ram Navami) ನಿಮಿತ್ತ ಧ್ವಜ ಹಿಡಿದು ಜೈ ಶ್ರೀರಾಮ್ ಅಂತಾ ಕೂಗುತ್ತಾ ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ತಡೆದು ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು (Assault Case) ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.
‘ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದಿರುವ ಆರೋಪಿಗಳು ‘ಜೊತೆಗೆ ಯಾವುದೇ ಪ್ರೀ ಫ್ಲಾನ್ ಕೂಡ ಇರಲಿಲ್ಲ, ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ಕು ಜನರು ಎರಡು ಬೈಕ್ಗಳಲ್ಲಿ ಬರ್ತಾ ಇದ್ವಿ ಎಂದು ಹೇಳಿದ್ದಾರೆ.
‘ನಾವು ಬೈಕ್ನಲ್ಲಿ ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಯ್ತು’ ಎಂದಿರುವ ಆರೋಪಿಗಳು ಈ ವೇಳೆ ಕಾರಿನಲ್ಲಿ ಮೂರು ನಾಲ್ಕು ಯುವಕರು ಬಂದು ನಮ್ಮ ಬೈಕ್ ಪಕ್ಕ ನಿಲ್ಲಿಸಿದ್ರು. ಈ ವೇಳೆ ಕಾರ್ನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತ ಜೋರಾಗಿ ಕಿರುಚಿದ್ರು. ಜೊತೆಗೆ ನಮಗೂ ಜೈ ಶ್ರೀರಾಮ್ ಅಂತ ಕೂಗಿ ಅಂದ್ರು. ಅದಕ್ಕೆ ನಾವು ನೀವೇ ಅಲ್ಲಾ ಹೂ ಅಕ್ಬರ್ ಅಂತ ಕೂಗಿ ಅಂತ ಅಂದ್ವಿ. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ ಸಾರ್’ ಎಂದು ಹೇಳಿದ್ದಾರೆ.