ಮೊಬೈಲ್ ರಿಪೇರಿ ಮಾಡಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆ
ಫೋನ್ ರಿಪೇರಿ ಮಾಡಿಸಿಕೊಡಲು ಪಾಲಕರು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜೈಪುರ ಮಂಡಲದ ವಲ್ಲಲ ಗ್ರಾಮದಲ್ಲಿ ನಡೆದಿದೆ. ಸೈಶುಮಾ(19) ಸೂಸೈಡ್ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.
ಪ್ಯಾಗ ಸರಕ್ಕ ಮತ್ತು ಸ್ವಾಮಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಳು. ಈ ಪೈಕಿ ಸೈಶುಮಾ ಮಂಚೇರಿಯಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಆಕೆ ಬಳಸುತ್ತಿದ್ದ ಸ್ಮಾರ್ಟ್ಫೋನ್ ಕೆಟ್ಟು ಹೋಗಿತ್ತು. ಹೀಗಾಗಿ ಆ ಫೋನ್ ರಿಪೇರಿ ಮಾಡಿಸಿಕೊಡುವಂತೆ ತಾಯಿ ಬಳಿ ಕೇಳಿದ್ದಳಂತೆ. ಆದರೆ ತಾಯಿ ಆಕೆಗೆ ಬುದ್ಧಿವಾದ ಹೇಳಿದ್ದಳು.
“ನೀನು ಆಗಾಗ ಫೋನ್ ಹಾಳು ಮಾಡಿಕೊಳ್ಳುತ್ತೀಯಾ, ನಮ್ಮ ಬಳಿ ಫೋನ್ ರಿಪೇರಿ ಮಾಡುವಷ್ಟು ಹಣವಿಲ್ಲ. ಸ್ವಲ್ಪ ದಿನ ಸುಮ್ಮನಿರು” ಅಂತಾ ಏರು ಧ್ವನಿಯಲ್ಲಿ ಬೈದು ಬುದ್ಧವಾದ ಹೇಳಿದ್ದರು ಎನ್ನಲಾಗಿದೆ. ನಾನು ಕೇಳಿದ ಹಾಗೆ ತಮ್ಮ ಅಣ್ಣ ಕೇಳಿದ್ದರೆ ಕೂಡಲೇ ರಿಪೇರಿ ಮಾಡಿಸಿಕೊಡುತ್ತಿದ್ದರು. ಆದರೆ ನಾನು ಏನಾದರೂ ಕೇಳಿದರೆ ಯಾವಾಗಲೂ ಇಲ್ಲ ಅಂತಾನೇ ಹೇಳುತ್ತಾರೆ ಅಂತಾ ಸೈಶುಮಾ ನೊಂದುಕೊಂಡಿದ್ದಳಂತೆ. ಮೊಬೈಲ್ ರಿಪೇರಿ ಮಾಡಿಸಿಕೊಡುವುದಿಲ್ಲವೆಂದ ಪೋಷಕರ ಮಾತು ಆಕೆಗೆ ನೋವುಂಟು ಮಾಡಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ ಎನ್ನಲಾಗಿದೆ.