ರಾಜ್ಯ

ಚಿನ್ನ ಕೊಳ್ಳುವ ಯೋಚನೆಯಲ್ಲಿದ್ದೀರಾ!! ಗಗನಕ್ಕೆರಿದ ಚಿನ್ನದ ಬೆಲೆ!!

ಬೆಂಗಳೂರು: ಏಪ್ರಿಲ್‌ ತಿಂಗಳು ಆಭರಣ ಪ್ರಿಯರಿಗೆ ನಿಜಕ್ಕೂ ಶುಭವಲ್ಲ. ಏಕೆಂದರೆ ಈ ತಿಂಗಳ ಆರಂಭದಿಂದಲೂ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿದೆ. ಚಿನ್ನ & ಬೆಳ್ಳಿಗೆ ಯಾವಾಗಲೂ ಬೆಲೆ ಹೆಚ್ಚು, ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಚಿನ್ನ & ಬೆಳ್ಳಿ ಹೊಸ ದಾಖಲೆ ಬರೆಯುತ್ತಿವೆ.

ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡಿದೆ. ಒಂದು ಚಿನ್ನ ಕೊಂಚ ಕಡಿಮೆಯಾದರೆ ಮರುದಿನ ದುಪ್ಪಟ್ಟ ಏರಿಕೆ ಕಾಣುತ್ತಿದೆ. ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ.

ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಹೊಸ ದಾಖಲೆ ಬೆಲೆ ಪಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವೆರಡೂ ಲೋಹಗಳಿಗೆ ಭಾರೀ ಬೇಡಿಕೆ ಮುಂದುವರಿದಿದೆ. ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ,ಏರಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,350 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,290ರೂ.
ಬೆಳ್ಳಿ ಬೆಲೆ 1 ಕೆಜಿ: 82,000 ರೂ.

ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 64,150 ರೂಪಾಯಿ ಇತ್ತು. ಆದರೆ ಇಂದು 65,350 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 1200 ರೂ. ಏರಿಕೆಯಾಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 69,980 ರೂಪಾಯಿ ಇತ್ತು. ಆದರೆ ಇಂದು 71,290ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 1310 ರೂ. ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):
ಬೆಂಗಳೂರು: 65,350ರೂ.
ಮುಂಬೈ: 65,350 ರೂ
ದೆಹಲಿ: 65,500 ರೂ.
ಕೇರಳ: 65,350ರೂ.
ಅಹ್ಮದಾಬಾದ್:65,400 ರೂ.
ಜೈಪುರ್: 65,500 ರೂ

Naveen Kumar

Managing Editor

Related Articles

Leave a Reply

Your email address will not be published. Required fields are marked *

Back to top button