ಹೆಚ್ ಎಸ್ ಆರ್ ಪಿ (HSRP ) ನಂಬರ್ ಪ್ಲೇಟ್ : ಈ ದಿನಾಂಕದೊಳಗೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ 500 ರೂಪಾಯಿ ದಂಡ ಗ್ಯಾರಂಟಿ
HSRP Number Plate (ಹೆಚ್ ಎಸ್ ಆರ್ ಪಿ) : 2019ರ ಏಪ್ರಿಲ್ 1ರ ಹಿಂದೆ ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಸಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಗಡುವು ನೀಡುತ್ತಾ ಬಂದಿದೆ.
ಇದೀಗ ನೀಡಿರುವ ಗಡುವು ಕೊನೆಯದಾಗಿದ್ದು, ಇದರೊಳಗೆ ನೋಂದಣಿ ಮಾಡಿಕೊಳ್ಳದಿರುವವರು 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
2019ರ ಏಪ್ರಿಲ್ 1ರ ಹಿಂದೆ ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೂ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಮಾಡಿಸಿಕೊಳ್ಳಲು ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ಇನ್ನು ಸೆಪ್ಟೆಂಬರ್ 16ರೊಳಗೆ ನೋಂದಣಿ ಮಾಡಿಸಿಕೊಂಡವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ, ನೋಂದಣಿ ಮಾಡಿಸಿಲ್ಲದವರು 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಕೇಂದ್ರ ಸಾರಿಗೆ ಇಲಾಖೆಯಿಂದ ದೇಶಾದ್ಯಂತ ಎಲ್ಲಾ ಮೋಟಾರು ವಾಹನಗಳಿಗೆ ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶದಿಂದ ಎಚ್‌ಎಸ್‌ಆರ್‌ಪಿ ನೋಂದಣಿಗೆ ಆದೇಶ ಹೊರಡಿಸಲಾಗಿದೆ. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದು, ಬಳಿಕ ದಂಡ ವಿಧಿಸಲು ಸೂಚನೆ ನೀಡಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ 4 ಬಾರಿ ಗಡುವು ನೀಡಿದ್ದು, ಗಡುವು ವಿಸ್ತರಣೆ ಅವಧಿಯು ಸೆಪ್ಟೆಂಬರ್ 15ಕ್ಕೆ ಮುಕ್ತಾಯ ಆಗಲಿದೆ.
ರಾಜ್ಯ ಸರ್ಕಾರವು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದಲ್ಲದೇ ನ್ಯಾಯಾಲಯವೂ ಕೂಡ ವಾಹನ ಸವಾರರಿಗೆ ಕೆಲವು ದಿನಗಳ ಕಾಲ ಗಡುವು ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದ್ದರಿಂದ ನಾಲ್ಕು ಬಾರಿ ಗಡುವು ನೀಡಿದ ನಂತರವೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದವರ ವಿರುದ್ಧ ದಂಡವನ್ನು ವಿಧಿಸಲು ತೀರ್ಮಾನ ಮಾಡಲಾಗಿದೆ. ಬರೀ ಆರ್‌ಟಿಓ ಅಲ್ಲದೆ, ಟ್ರಾಫಿಕ್ ಪೊಲೀಸರಿಂದಲೂ ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಒಟ್ಟು 2 ಕೋಟಿಗೂ ಅಧಿಕ ವಾಹನಗಳಿವೆ. ಆದರೆ, ಇಲ್ಲಿಯವರೆಗೆ ಕೇವಲ 51,00,000 ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ನೊಂದಣಿಯಾಗಿದ್ದು, ಉಳಿದ 1.49 ಕೋಟಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ. ಆದ್ದರಿಂದ ಸೆಪ್ಟೆಂಬರ್ 16ರಿಂದಲೇ ಸಾರಿಗೆ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್ ಮಾಡಲು ಚಿಂತನೆ ಮಾಡಿದೆ. ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿಗೆ 1000 ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯವುದೇಗೆ?
* https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿ ಇನ್ ಆಗಬೇಕು.
* ನಂತರ Book HSRP ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ.
* ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ.
* ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ.
* HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ.
* ಮೊಬೈಲ್ ನಂಬರ್‌ಗೆ ಒಟಿಪಿಯನ್ನು ನಮೂದಿಸಿ
* HSRP ನಂಬರ್ ಪ್ಲೇಟ್ ಅಳವಡಿಕೆಗೆ ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ.