ಸೋಮವಾರಪೇಟೆಯ ನಗರದಲ್ಲಿ ವೇಶ್ಯಾವಾಟಿಕೆ, ಬಂಧನ
ನಗರದಲ್ಲಿ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲಗಳು ಹುಟ್ಟಿಕೊಂಡಿದ್ದು ಯಾವುದೇ ಭಯವಿಲ್ಲದೇ ತಮ್ಮ ಚಟುವಟಿಕೆ ಸಾಗುತ್ತಿತ್ತು, ಇದೀಗ ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ NCIB ಸದಸ್ಯರು ಆದ ಅಭಿಷೇಕ್ ನೀಡಿದ ದೂರಿನ ಅನ್ವಯ ಕಾರ್ಯ ಪ್ರವೃತರಾದ ಪೊಲೀಸ್ ಇಲಾಖೆಯು ದಿನಾಂಕ 07/10/2024ರ ಸೋಮವಾರದಂದು ರಾತ್ರಿ ಸರಿಸುಮಾರು 9.30ಕೆ ಕರ್ಕಳಿ ಯ ಮನೆಯೊಂದರಲ್ಲಿ ನಡೆಯುತಿದ್ದ ವೇಶ್ಯಾವಾಟಿಕೆ ಜಾಲ ದ ಮೇಲೆ ದಿಡೀರ್ ದಾಳಿಯನ್ನು ಮಾಡಿದ್ದು ಇದರ ಮುಖ್ಯ ಆರೋಪಿ ಕೃಷನನ್ನು ಬಂಧಿಸಿದ್ದು, ಓರ್ವ ಮಹಿಳಾ ಸಂತ್ರಸ್ತೆಯನ್ನ ಪೊಲೀಸರು ರಕ್ಷಣೆಯನ್ನು ಮಾಡಿದ್ದಾರೆ. ವೇಶ್ಯವಾಟಿಕೆ ಮಾಹಿತಿ ತಿಳಿದ ತಕ್ಷಣ ಈ ಕಾರ್ಯಾಚರಣೆಯನ್ನು ಸೋಮವಾರಪೇಟೆ ಪೊಲೀಸ್ ಇನ್ಸೆಕ್ಟರ್ ರವರ ನೇತ್ರತ್ವದ ದಾಳಿ ಮಾಡಲಾಗಿದೆ.
ಈ ದಾಳಿಯಲ್ಲಿ ಕೊಡಗು ಜಿಲ್ಲಾ ಡಿ ಸಿ ಆರ್ ಬಿ ತಂಡವಿದ್ದು ಹಾಗೂ
ಸೋಮವಾರಪೇಟೆ ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್, ಪ್ರವೀಣ್, ಮಲ್ಲೇಶ್, ಮಹಿಳಾ ಸಿಬ್ಬಂದಿಗಳಾದ ವೀಣಾ ರಾಜಶ್ರೀ ಭಾಗಿಯಾಗಿದ್ದರು.