ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ತನಿಖೆಗೆ 4 ತಂಡ ರಚನೆ

ನ್ಯೂಸ್ ಎನ್ ಬ್ಯುರೋ : ಮುಡಾ ಸಂಬಂಧ ಹೈಕೋರ್ಟ್​ ನಲ್ಲಿ ಸಿಎಂ ಪ್ರಾಸಿಕ್ಯೂಷನ್​ ರದ್ದುಕೋರಿ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಕೋರ್ಟ್​​ ಇತ್ತೀಚೆಗೆ ವಜಾಗೊಳಿಸಿ ತನಿಖೆಗೆ ಅಸ್ತು ಎಂದಿತ್ತು.

ಬಳಿಕ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ಸಹ​ ಮೈಸೂರು ಲೋಕಾಯುಕ್ತ ತನಿಖೆಗೆ ಆದೇಶ ನೀಡಿತ್ತು.

ಇದಾದ ಬೆನ್ನಲ್ಲೇ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಸಿಎಂ & ಕುಟುಂಬದ ವಿರುದ್ಧ FIR ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ SP ಉದೇಶ್ ಅವರ ನೇತೃತ್ವದಲ್ಲಿ DySP ಮಾಲತೀಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್, ಇನ್ಸ್​​​ಪೆಕ್ಟರ್ ಒಳಗೊಂಡ ಒಟ್ಟು 4 ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ.

ಪ್ರಕರಣದಲ್ಲಿ ಸಿಎಂ A1 ಆರೋಪಿಯಾಗಿದ್ದರೆ ಅವರ ಪತ್ನಿ ಪಾರ್ವತಿಯವರು A2, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ A3 ಹಾಗೂ ಭೂಮಿ ಮಾರಾಟ ಮಾಡಿದ್ದ ಮಾಲೀಕನನ್ನು A-4 ಆರೋಪಿಯನ್ನಾಗಿಸಲಾಗಿದ್ದು ತನಿಖೆ ಚುರುಕುಗೊಂಡಿದೆ.

Naveen Kumar U

Managing Editor

Related Articles

Leave a Reply

Your email address will not be published. Required fields are marked *

Back to top button