ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ
ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿಯ ಆಗಳಿ , ನೀರುಗುಂದ, ಜನರ್ಧನಹಳ್ಳಿ ಮತ್ತು ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಐಪಿಸಿ ಕರಿಷ್ಮಾ ಸೆಂಟರ್ ವತಿಯಿಂದ ಕಾರ್ಯದರ್ಶಿ ಹಾಗೂ ಮಧ್ಯಮ ವರದಿಗಾರರದ ಪಾಸ್ಟರ್. ಫ್ರೆಡ್ಡಿ ಎನ್ ಸಿ ಬಿ ಐ ವರದಿಗಾರರದ ಹಾಗೂ ರಘು ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಐಪಿಸಿ ಕರಿಷ್ಮಾ ಸೆಂಟರ್ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ಪಾಸ್ಟರ್. ಫ್ರೆಡ್ಡಿ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಮಾಜಕ್ಕಾಗಿ ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ನಮ್ಮೂರ ಶಾಲೆ ನಮ್ಮೂರ ಶಾಲೆಯಾಗಿ ಉಳಿಯ ಬೇಕಾದರೆ ಗ್ರಾಮದವರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವುದಕ್ಕಿಂತ ನಮ್ಮೂರ ಶಾಲೆಗೆ ಮಕ್ಕಳ ದಾಖಲಾತಿ ಮಾಡಬೇಕು ಎಂದು ಸಲಹೆ ನೀಡಿದರು ನಾವು ಕಲಿಕಾ ಸಾಮಗ್ರಿಗಳನ್ನು ಮಕ್ಕಳ ಕಲಿಕೆ ಪ್ರೋತ್ಸಾಹಿಸಿ ಕೊಡುತ್ತಿದ್ದೇವೆ ಎಂದರು.
ಕಲಿಕಾ ಸಾಮಗ್ರಿಗಳ ದೇಣಿಗೆ ನೀಡಿದ ಪಾಸ್ಟರ್. ಫ್ರೆಡ್ಡಿ ಅವರನ್ನು ಹಾಗೂ ರಘು ಅವರನ್ನು ಸಮಾರಂಭದಲ್ಲಿ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರುಗಳು ಆಯಾ ಶಾಲೆಗಳಲ್ಲಿ ಶಾಲು ಹೊದಿಸಿ ಗೌರವಿಸಿದರು . ಈ ಸಂದರ್ಬದಲ್ಲಿ ಅಗಳಿ , ನೀರುಗುಂದ, ಜನರ್ಧನಹಳ್ಳಿ ,ಹಂಪಾಪುರ ಸರ್ಕಾರಿ ಶಾಲೆಗಳ ಮುಖ್ಯೋಪದ್ಯರುಗಳಾದ ವಿಷ್ಣುವರ್ಧನ, ಜೆ ಡಿ ಸುರೇಶ್, ಹರೀಶ್ ಡಿ ಹೆಚ್,ರಮೇಶ್ ಹಾಗೂ ಶಾಲೆಯ ಸಹ ಶಿಕ್ಷಕಿ ಮಂಜುಳಾ ಮತ್ತು ಪೋಷಕರು ಉಪಸ್ಥಿತರಿದ್ದರು ಜನಾರ್ದನಹಳ್ಳಿ ಶಾಲೆಯ ಅಂಗನವಾಡಿ ಸಹ ಶಿಕ್ಷಕಿ ಶಾರದ ಅವರು ಪ್ರಾರ್ಥನೆ ಸಲ್ಲಿಸಿದರು, ಹಂಪಾಪುರ ಶಾಲೆಯ ವಿದ್ಯಾರ್ಥಿ ನಿಹಾಲ್ ಸಿ ಆರ್ ಸ್ವಾಗತವನ್ನು ಜನಾರ್ದನಹಳ್ಳಿ ಶಾಲೆಯ ವಿದ್ಯಾರ್ಥಿಗಳು ವಂದನೆ ಸಲ್ಲಿಸಿದರು
TALUK REPORTER
FREDDY PC