ಸುದ್ದಿ
ಶಾಲಾ ಕಾಲೇಜುಗಳಿಗೆ ಮಳೆಯ ರಜೆ ನೀತಿಗೆ ಗರಂ: ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರ ಮತ್ತು ಪೋಷಕರ ಆಕ್ರೋಶ,
ಕೊಡ್ಲಿಪೇಟೆ:ಕೊಡ್ಲಿಪೇಟೆ ಬಾಗದಲ್ಲಿ ನನ್ನೆಯಿಂದ ವಿಪರೀತ ಮಳೆಯಾದರೂ ರಜೆ ನೀಡದಿರುವುದು ಸರಿಯಲ್ಲ ಎಂದು ಪೋಷಕರು ಮತ್ತು ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಡಿ ಎನ್ ವಸಂತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಮಕ್ಕಳು ಶಾಲೆಗೆ ತೆರಳುವ ಸಮಯದಲ್ಲಿ ದೊಡ್ಡಾಕುಂದ ರಾಮ ಎಸ್ಟೇಟ್ ಎದುರುಗಡೆ ರಸ್ತೆಪಕ್ಕದ ಒಣಗಿದ ಮಾವಿನ ಮರ ಬಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿರುವುದಿಲ್ಲ,ಆಯಾ ತಾಲೂಕಿನ ಪರಿಸ್ಥಿತಿಗೆ ಅನುಗುಣವಾಗಿ ರಜೆ ನೀಡುವ ಅಧಿಕಾರವನ್ನು ಸ್ಥಳೀಯ ಅಧಿಕಾರಿಗಳು ಮಳೆಯ ಸ್ಥಿತಿ ಪರಿಗಣಿಸಿ ಶಾಲೆಗಳಿಗೆ ರಜೆ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು
ವರದಿ: ಫ್ರೆಡ್ಡಿ ಕೊಡ್ಲಿಪೇಟೆ