ಸುದ್ದಿ
ವಾಕಿಂಗ್ ಗೆ ಬರುತ್ತಿದ್ದ ಅಪ್ರಾಪ್ತಗೆ ಮದುವೆ ಆಮಿಷವೊಡ್ಡಿ ಅತ್ಯಾ**ಚಾರ! ಅಪರಾಧಿಗೆ 20 ವರ್ಷ ಜೈಲು
ಬೆಂಗಳೂರು : ಪಾರ್ಕ್‌ಗೆ ವಾಕಿಂಗ್ ಬರುತ್ತಿದ್ದ 16 ವರ್ಷದ ಬಾಲಕಿಗೆ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಲಾಪುರದ ಲೋಕೇಶ್ ಅಪರಾಧಿ. ಚೆನ್ನಮ್ಮನಕೆರೆ ಶ್ರೀಕಂಠೇಶ್ವರ ಪಾರ್ಕ್ ನಿರ್ವಹಣೆ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದ ಲೋಕೇಶ್, ವಾಕಿಂಗ್‌ಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ.
ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಇಷ್ರತ್ ಜಹಾನ್ ವಾದ-ಪ್ರತಿವಾದ ಆಲಿಸಿ ಲೋಕೇಶ್ ಅಪರಾಧಿ ಎಂದು ೋಷಣೆ ಮಾಡಿದರು. 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ 3 ಲಕ್ಷ ರೂ. ಪರಿಹಾರವನ್ನು ಸರ್ಕಾರ ಭರಿಸಬೇಕು. ಜತೆಗೆ ದಂಡದ ಮೊತ್ತವನ್ನು ಆಕೆಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.