ಸುದ್ದಿ

ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಕೇಸ್: 98 ಸವರ್ಣಿಯರಿಗೆ ಜೀವಾವಧಿ ಹಾಗು ಒಡ್ಡ ಬೋವಿಗಳಿಗೆ 5 ವರ್ಷ ಶಿಕ್ಷೆ

ಕೊಪ್ಪಳ (ನ್ಯೂಸ್ ಎನ್ ಕನ್ನಡ ) : ಪುಟ್ಟ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ನೆಡೆದ ದಲಿತರು ಮತ್ತು ಸವರ್ಣಿಯರ ಗಲಾಟೆ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಂಡಿದೆ. ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 98 ಅಪರಾಧಿಗಳಿಗೆ ಇದೀಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದೌರ್ಜನ್ಯ ಎಸಗಿದವರಲ್ಲಿ ಒಡ್ಡರು ಬೋವಿಗಳು ಇದ್ದಾರೆ ಎನ್ನುವುದೇ ವಿಪರ್ಯಾಸ, ಒಡ್ಡರು ಕರ್ನಾಟಕ ದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದು ಕೆಲವೊಂದು ಕಡೆ ಇವರೇ ಮೇಲ್ಜಾತಿಯವರಂತೆ ಅಸ್ಪೃಶ್ಯತೆ ಆಚರಣೆ ಮಾಡುವುದು ಇದೆ. ಇವರು ಅಂಬೇಡ್ಕರ್ ನೀಡಿದ ಮೀಸಲಾತಿ ಪಡೆದು ಅಸ್ಪೃಶ್ಯ ಜಾತಿಗಳಾದ ಮಾದಿಗ, ಹೊಲೆಯರನ್ನು ಕೀಳಾಗಿ ಕಾಣುವುದು ತಿನ್ನೋ ತಟ್ಟೆಗೆ….. ಮಾಡಿದಂಗೆ. ಆದಷ್ಟು ಬೇಗ ಜಾತಿ ಒಳಮೀಸಲಾತಿ ಜಾರಿಗೆ ಬಂದು ನೊಂದ ಸಮುದಾಯಗಳಿಗೆ ನ್ಯಾಯ ದೊರಕಿದರೆ ಸಾಕು.

ಏನಿದು ಪ್ರಕರಣ: ಅದು 2014 ಅಕ್ಟೋಬರ್ 28 ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಅಕ್ಷರಶಃ ಧಗದಗಿಸಿತ್ತು.‌ಗುಡಿಸಲುಗಳಿಗೆ ಬೆಂಕಿ ಬಿದ್ದಿತ್ತು, ಈಡಿ ಗ್ರಾಮದ ದಲಿತರು ಹಾಗೂ ಸವರ್ಣಿಯರ ನಡುವಿನ ಗಲಾಟೆಯಿಂದ ಇಡೀ ಗ್ರಾಮ ರಣಾಂಗಣವಾಗಿತ್ತು. ಕ್ಷೌರದ ಅಂಗಡಿ ಮತ್ತು ಹೋಟೆಲ್ ಗೆ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ‌ ಇಡುವ ಹಂತಕ್ಕೆ ತಲುಪಿತ್ತು.

ತನಿಖೆ ಚುರುಕು ಗೊಳಿಸಿದ್ದ ಪೊಲೀಸರು: ಇನ್ನು ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರ ಮದ್ಯೆ ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ,‌ ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಒಟ್ಟು 117 ಜನರ ವಿರುದ್ಧ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು.

ವಾದ-ವಿವಾದ ಆಲಿಸಿ ತೀರ್ಪು ಪ್ರಕಟಿಸದ ನ್ಯಾಯಾಧೀಶರು: ಅಕ್ಟೋಬರ್ 21 ರವರೆಗೆ ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಅಂದೇ ಎಲ್ಲ‌ ಆರೋಪಿಗಳಿಗೆ ನೀವು ಅಪರಾಧ ಮಾಡಿರುವುದು ಸಾಬೀತಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನ ಅಕ್ಟೋಬರ್ 24 ಪ್ರಕಟಿಸುವುದಾಗಿ ಹೇಳಿ, ಎಲ್ಲ 101 ಆರೊಪಿಗಳನ್ನು ನ್ಯಾಯಾಂಗ ಬಂಧನಕ್ಕೆ‌ ಕಳುಹಿಸಿದ್ದರು. 101 ಜನ ಅಪರಾಧಿಗಳನ್ನ ಪೊಲೀಸರು ನ್ಯಾಯಾಲಯಕ್ಕೆ ಬಿಗಿಬಂದೋಬಸ್ತ್ ನಲ್ಲಿ ಕರೆತರಲಾಗಿತ್ತು, ಅಪರಾದಿಗಳ ಸಮ್ಮುಖದಲ್ಲೇ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ್ದಾರೆ.

10 ವರ್ಷಗಳ ಬಳಿಕ ಬಂತು ತೀರ್ಪು: ಈ ಪ್ರಕರಣ ಈಗ ಸುದಿರ್ಘ ಹತ್ತು ವರ್ಷಗಳ ವಾದ ವಿವಾದಗಳ ಆಲಿಸಿದ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ್.ಜಿ ಅವರು ಪ್ರಕರಣದಲ್ಕಿ ಬಾಗಿಯಾಗಿದ್ದ 101 ಜನ ಆರೋಪಿಗಳನ್ನ ಅಪರಾಧಿ ಎಂದು ಘೋಷಣೆ ಮಾಡಿದೆ, 98 ಜನರಿಗೆ ಜೀವಾವದಿ ಶಿಕ್ಷೆ ಜೊತೆ 5 ಸಾವಿರ ದಂಡ ಹಾಗೂ ಮೂರು ಜನ ಅಪರಾದಿಗಳಿಗೆ 5 ವರ್ಷ ಶಿಕ್ಷೆ ಹಾಗೂ 2 ಸಾವಿರ ದಂಡ ವಿದಿಸಿ ಆದೇಶ ಹೊರಡಿಸಿದ್ದಾರೆ.

ತೀರ್ಪಿನ ನಂತರ ಸಂಬಂಧಿಕರ ಆಕ್ರೋಶ-ಕಣ್ಣೀರು: ತೀರ್ಪು ಕಾಯ್ದಿರಿಸಿದ ಹಿನ್ನೆಲೆ ಇಡಿ ಮರಕುಂಬಿ ಗ್ರಾಮದ ಜನರು ಇಂದು ನ್ಯಾಯಾಲಯದ ಆವರಣದಲ್ಲಿ ಸೇರಿದ್ರು. ಜೀವಾವದಿ ಶಿಕ್ಷೆ ಪ್ರಕಟವಾಗ್ತಿದ್ದಂತೆ ಅಪರಾದಿಗಳ ಸಂಬಂದಿಕರು ಆಕ್ಷೇಪ ವ್ಯಕ್ತಪಡಿಸಿದರು. ಸಂಭಂದಿಕರಿಗೆ ಶಿಕ್ಷೆ ಪ್ರಕಟವಾದ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲೆ ಕಣ್ಣಿರು ಹಾಕಿದ್ರು. ಘಟ‌ನೆ ನಡೆದು 10 ವರ್ಷಗಳು ಕಳೆದಿವೆ.‌ಆ ಘಟನೆಯ ಬಳಿಕ ಗ್ರಾಮದಲ್ಲಿ ಎಲ್ಲರೂ ಒಟ್ಟಾಗಿ ಜೀವನ ಮಾಡ್ತಿದ್ರು.‌ಆದ್ರೆ ಈಗ ನ್ಯಾಯಾಲಯದ ತೀರ್ಪಿನ ಬಳಿಕ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಜಾತಿ ನಿಂದನೆ ಹಾಗೂ ಅಸ್ಪ್ರಶ್ಯತೆ ಆಚರಣೆ ಪ್ರಕರಣದಲ್ಲಿ, ಇಷ್ಟು ಜನರಿಗೆ ಜೀವಾವದಿ ಶಿಕ್ಷೆಯಾಗಿರೋದು ದೇಶದಲ್ಲೆ ಇದು ಮೊದಲ ಪ್ರಕರಣ ಎನ್ನಲಾಗಿದೆ. ಎನೇ ಆದ್ರೂ ಇಂತಹ ಪ್ರಕರಣಗಳು ಇಲ್ಲಿಗೆ ಕೊನೆಯಾಗಲಿ ಎನ್ನುವುದೆ ಎಲ್ಲರ ಆಶಯ.

Naveen Kumar U

Managing Editor

Related Articles

Leave a Reply

Your email address will not be published. Required fields are marked *

Back to top button