ಮಡಿಕೇರಿಯಲ್ಲಿ ಎಕ್ಸಿಬಿಶನ್ ಡೀಲಿಂಗ್
ಮಡಿಕೇರಿ: ರಾಣಿಪೇಟೆಗೆ ಹೋಗುವ ದಾರಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪತ್ರವಿಲ್ಲದೆ ನಡೆಯುತ್ತಿದೆ ಜಾಯಿಂಟ್ ವೀಲ್ ಎಕ್ಸಿಬಿಶನ್ ಸಮತಟ್ಟಿಲ್ಲದ ಭೂಮಿಯಲ್ಲಿ ಜಾಯಿಂಟ್ ವೀಲ್ ನ ರೌದ್ರವತಾರ , ಕಳೆದ 15 ದಿವಸದಿಂದಲೂ ಪರ್ಮಿಶನ್ ಗಾಗಿ ಒಡಾಡಿ ಕೊನೆಗೂ ಡೀಲಿಂಗ್ ಕುದುರಿಸಲಾಗಿದೆ. ಸ್ಥಳಿಯ ಮತ್ತು ಸಂಘಸಂಸ್ಥೆಗಳ ವಿರೋಧ ಇದ್ದರೂ ಕೂಡಾ ನಗರ ಸಭೆಯ ನೂತನ ಆಯುಕ್ತರಾದ ರಮೇಶ್ ರವರು ಅನುಮತಿ (NOC) ನೀಡಿರುವುದು ಖಂಡನೀಯಾ, ಅಲ್ಲದೆ ಮಾದ್ಯಮ ಪ್ರತಿನಿಧಿ ಬೇಟಿ ನೀಡಿದಾಗ ಡೀಲಿಂಗ್ ಕುದುರಿಸಿಕೊಂಡಿರುವುದು ಬೆಳಕಿಗೆ ಬಂದಿರುತ್ತದೆ, 30 ಸಾವಿರ ಕ್ಕೆ ಒಂದು ಇಲಾಖೆಗೆ ಕೊಟ್ಟರೆ ,ಇನ್ನೊಂದ್ದಕ್ಕೆ 1.5 ಲಕ್ಷ ಕೊಟ್ಟಿರುವುದಾಗಿ ಮಾಲೀಕ ಹೇಳಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಅನುಮತಿ ಪತ್ರವಿಲ್ಲದೆ ಯಾರು ಇಷ್ಟು ಧೈರ್ಯವಾಗಿ ಈ ರೀತಿಯ ಇಂತಹ ಜಾಯಿಂಟ್ ವೀಲ್ ರನ್ ಮಾಡುತ್ತಾರೆ ಎಂಬುದಾಗಿ ತಿಳಿದಿಲ್ಲ. ಸಾರ್ವಜನಿಕ ವಲಯದಲ್ಲೂ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು ಜಿಲ್ಲಾಡಳಿತ ಇದನ್ನು ಪರಿಗಣಿಸಿ ಅಲ್ಲಿರುವ ಸ್ಥಳೀಯ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಪರಿಗಣಿಸಿ ಸ್ಥಗಿತಗೊಳಿಸಲು ಕೇಳಿಕೊಂಡಿದೆ.
ಜಿಲ್ಲಾ ವರದಿಗಾರರು
ಜಾನ್ಸನ್