ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ
ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣಾ ನಿರೀಕ್ಷಕರಾದ ಜಿ ಕೃಷ್ಣ ರಾಜು ರವರ ಮಾರ್ಗದರ್ಶನದ ಮೇರೆಗೆ ಬೀಟ್ ಸಿಬ್ಬಂದಿಗಳಾದ ಮುಖ್ಯ ಪೇದೆ ಪ್ರದೀಪ್ ಕುಮಾರ್ ಹಾಗೂ ಮಹಿಳಾ ಪೊಲೀಸ್ ಉಷಾ ಹೆಬ್ಬುಲ್ಸೇ ಮತ್ತು ಮುಳ್ಳೂರು ಗ್ರಾಮಗಳಿಗೆ ತೆರಳಿ ಪೊಲೀಸರ ಜನಸ್ನೇಹಿ ಕಾರ್ಯಕ್ರಮವಾಗಿರುವ ‘ಮನೆ ಮನೆಗೆ ಪೊಲೀಸರು’ ಉಪಕ್ರಮದ ಭಾಗವಾಗಿ ಸ್ತ್ರೀ ಸಾಮಾನ್ಯನ ಮನೆ ಬಾಗಿಲಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಪೇದೆ ಪ್ರದೀಪ್ ಕುಮಾರ್ ಸೈಬರ್ ಅಪರಾಧ, ಮಾದಕ ವಸ್ತು, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಲಾಯಿತು ನಂತರ ಮನೆಯಲ್ಲಿರುವವರ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡು ತುರ್ತು ಸಂಧರ್ಭ ಗಳಲ್ಲಿ 112ಗೆ ಕರೆ ಮಾಡುವಂತೆ ತಿಳಿಸಿ ಬೀಟ್ ಸಿಬ್ಬಂದಿಯವರ/ ಠಾಣೆಯ / ದೂರವಾಣಿ ಸಂಖ್ಯೆ ಗಳನ್ನು ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳುವಳಿಕೆ ನೀಡಲಾಯಿತು.
ಠಾಣಾ ವ್ಯಾಪ್ತಿಯಲ್ಲಿ ಪಾರದರ್ಶಕ, ಸಮುದಾಯ-ಆಧಾರಿತ ಮತ್ತು ಸುಲಭವಾಗಿ ಲಭ್ಯವಿರುವ ಪೊಲೀಸ್ ಸೇವೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.
ನಾವು ಪೌರ-ಕೇಂದ್ರಿತ ಪೊಲೀಸ್ ಸೇವೆ ಮತ್ತು ಸಕ್ರಿಯ ಸಮುದಾಯ ತೊಡಗಿಸಿಕೊಳ್ಳುವಿಕೆಗೆ ಒಂದು ಹೆಜ್ಜೆ ಹತ್ತಿರವಾಗಿದ್ದೇವೆ
ಫ್ರೆಡ್ಡಿ ಪಿಸಿ