ಸುದ್ದಿ
ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಇಬ್ಬರ ಸಾವು
ಮಡಿಕೇರಿ:ಕೊಯನಾಡು ಬಳಿ ಲಾರಿ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಇಬ್ಬರ ಸಾವು
ರಾಷ್ಟೀಯ ಹೆದ್ದಾರಿ 275 ಯಲ್ಲಿ ಇಂದು ಅಂದಾಜು ಮಧ್ಯಾಹ್ನ 1:30 ರ ವೇಳೆಗೆ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತಿದ್ದ ಕಾರು ಹಾಗೂ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಸಂಚರಿಸುತಿದ್ದ ಲಾರಿ ನಡುವೆ ಕೊಯನಾಡು ಬಳಿ ಅಪಘಾತ ಸಂಭವಿಸಿದ್ದು ಕಾರಿನ ಲ್ಲಿದ್ದ ನಾಲ್ವಾರಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಹಾಗೂ ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ,ಅಪಘಾತಕ್ಕೊಳಗಾದ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪ ಮೂಲದ್ದೆಂದು ತಿಳಿದು ಬಂದಿದ್ದು, ಮೃತಪಟ್ಟವರನ್ನು ನಿಹಾದ್, ರಿಷಾನ್, ಮತ್ತು ರಾಶಿಬ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಮೃತ ಯುವಕನ ಹೆಸರು ಇನ್ನಷ್ಟೇ ತಿಳಿಯಬೇಕಾಗಿದೆ.
ವರದಿಗಾರರು
ಜಾನ್ಸನ್ ಕೊಡಗು