ಸುದ್ದಿ

ನಟ ದರ್ಶನ್ ಗೆ ಬೇಲ್ – ಶೂಟಿಂಗ್ ಮಾಡುವಂತಿಲ್ಲ, ಪಾಸ್​​ಪೋರ್ಟ್ ಸರೆಂಡರ್​ ಮಾಡಬೇಕು; ದರ್ಶನ್​ಗೆ ಕೋರ್ಟ್ ಹಾಕಿದ ಷರತ್ತುಗಳಿವು

ನ್ಯೂಸ್ ನೆಪ್ಚೂನ್ ಬ್ಯುರೋ : ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್​ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್​ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.

ದರ್ಶನ್ ಅವರಿಗೆ ಜಾಮೀನು ನೀಡಿದ ಬಳಿಕ ಕೆಲವು ಷರತ್ತುಗಳನ್ನು ಹಾಕಿದೆ. ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ದರ್ಶನ್​ ಕೋರ್ಟ್​ಗೆ ಸಲ್ಲಿಕೆ ಮಾಡಬೇಕಿದೆ.

ಈ ರೀತಿಯ ಪ್ರಕರಣದಲ್ಲಿ ಹೊರ ಬಂದ ಬಳಿಕ ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆ ಇರುತ್ತದೆ. ಹಾಗಾದಲ್ಲಿ ಅವರನ್ನು ಮರಳಿ ತರೋದು ಕಷ್ಟ. ಹೀಗಾಗಿ ಪಾಸ್​​ಪೋರ್ಟ್​ನ ಕೋರ್ಟ್​ಗೆ ಸರೆಂಡರ್ ಮಾಡಬೇಕು ಎಂದು ಕೋರ್ಟ್ ದರ್ಶನ್​ಗೆ ಸೂಚನೆ ನೀಡಿದೆ.

ಫ್ಲೈಟ್ ರಿಸ್ಕ್ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದ್ದರು. ಪಾಸ್​ಪೋರ್ಟ್ ವಶಕ್ಕೆ ಪಡೆಯುವ ಷರತ್ತು ವಿಧಿಸಲು ಸರ್ಕಾರಿ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿ ಹಿನ್ನೆಲೆಯಲ್ಲಿ ಪಾಸ್​ಪೋರ್ಟ್ ಸರೆಂಡರ್ ಮಾಡಲು ಆದೇಶ ನೀಡಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ದರ್ಶನ್ ಪರ ವಕೀಲ ಎಂದು ಸುನೀಲ್ , ‘ಮಧ್ಯಂತರ ಜಾಮೀನು ಅಷ್ಟೇ. ರೆಗ್ಯುಲರ್ ಬೇಲ್​ ಮೇಲೆ ಅವರನ್ನು ಹೊರಕ್ಕೆ ತರಬೇಕಿದೆ. ಆ ಜವಾಬ್ದಾರಿ ನಮ್ಮ ಮೇಲೆ ಇದೆ’ ಎಂದಿದ್ದಾರೆ.

Naveen Kumar U

Managing Editor

Related Articles

Leave a Reply

Your email address will not be published. Required fields are marked *

Back to top button