ಸುದ್ದಿ
ಜಾತ್ರೆ ಮೈದಾನಕ್ಕೆ ತಗುಲಿದ ಬೆಂಕಿ ವಿದ್ಯಾರ್ಥಿಗಳಿಬ್ಬರ ಸಮಯಪ್ರಜ್ಞೆಯಿಂದ ತಪ್ಪಿದ ಬಾರೀ ಅನಾಹುತ?
ಕುಶಾಲನಗರ :ಇಂದು ಮಧ್ಯಾಹ್ನ ಕುಶಾಲನಗರ ಜಾತ್ರೆ ಮೈದಾನದಲ್ಲಿ ಕಾಡುಗಿಡಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಫಾತಿಮ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಕಾಡುಗಿಡಗಳಿಗೆ ಅಗ್ನಿ ತಗುಲಿದ ಸಂದರ್ಭ ರಸ್ತೆಯಲ್ಲಿ ಹೋಗುತ್ತಿದ್ದ ಫಾತಿಮ ಶಾಲೆಯ ವಿದ್ಯಾರ್ಥಿಗಳಾದ ಜಾಯ್ ಮತ್ತು ಇನಾಜ್ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇಲ್ಲದಿದ್ದಲ್ಲಿ ಪಕ್ಕದ ಕಟ್ಟಡಗಳಿಗೆ, ಅಲ್ಲಿದ್ದ ಟೆಂಟ್ ಹಾಗೂ ಒಂದೆರೆಡು ವಾಹನಗಳಿಗೆ ಬೆಂಕಿಯ ಕೆನ್ನಾಲಿಗೆ ಹಬ್ಬಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಜಿಲ್ಲಾ ವರದಿಗಾರ
ಜಾನ್ಸನ್ ಕೊಡಗು