ಚಿಕ್ಕಮಗಳೂರು :25ನೇ ವರ್ಷದ ಅದ್ದೂರಿ ದತ್ತ ಜಯಂತಿ!;ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈಅಲರ್ಟ್, ಪೊಲೀಸ್ ಸರ್ಪಗಾವಲು!
ಚಿಕ್ಕಮಗಳೂರು :ಬಹುದೊಡ್ಡ ವಿವಾದಿತ ಧಾರ್ಮಿಕ ಕ್ಷೇತ್ರ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾಪಿನಾಡು ಚಿಕ್ಕಮಗಳೂರಿನಲ್ಲಿ ಸರ್ಪಗಾವಲು ಹಾಕಿದೆ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹೈಅಲರ್ಟ್ ಘೋಷಿಸಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ಡಿ.12 ರಿಂದ 14ರ ವರೆಗೆ ಹೈಅಲರ್ಟ್!
ವಿವಾದಿತ ಸ್ಥಳ ಚಂದ್ರದ್ರೋಣ ಪರ್ವತದ ಸಾಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಿಂದೂ ಪೀಠಕ್ಕಾಗಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಈ ಬಾರಿ 25ನೇ ವರ್ಷದ ಅದ್ದೂರಿ ದತ್ತಜಯಂತಿ ನಡೆಯಲಿದೆ.ಇಲ್ಲಿ ಡಿ.12 ರಿಂದ 14ರ ವರೆಗೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಯಾವುದೇ ಕೋಮು ಸಂಘರ್ಷ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಎಲ್ಲೆಡೆ ಕಟ್ಟೆಚ್ಚರ!
25ನೇ ವರ್ಷದ ಈ ದತ್ತಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲೆಯಾದ್ಯಂತ 7 ಎಸ್ಪಿಗಳೊಂದಿಗೆ 4000 ಪೊಲೀಸರು ಮತ್ತು 36 ಚೆಕ್ಕ್ ಪೋಸ್ಟ್, 600 ಸಿಸಿ ಕ್ಯಾಮರ ಅಳವಡಿಸಲಾಗಿದೆ.ಇನ್ನುಳಿದಂತೆ ಡಿ.13ರಿಂದ 14ರ ವರೆಗೆ ಜಿಲ್ಲೆಯಾದ್ಯಂತ ಮಧ್ಯ ಹಾಗೂ ಪ್ರವಾಸಿಗರನ್ನು ನಿಷೇಧಿಸಲಾಗಿದೆ.