ಸುದ್ದಿ

ಕೊಡ್ಲಿಪೇಟೆ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಸ್ವಾತಂತ್ರ್ಯ ದಿನಾಚರಣೆ .

ಕೊಡ್ಲಿಪೇಟೆಯಲ್ಲಿ ಕರವೇ (ನಾರಾಯಣಗೌಡರ ಬಣ) ಇವರ ವತಿಯಿಂದ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಕರವೇ ಅಧ್ಯಕ್ಷರಾದ ರಾಜೇಶ್ ರವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ನಂತರ ಕೊಡ್ಲಿಪೇಟೆಯ ನಿವೃತ್ತ ಸೇನಾ ಯೋಧರಾದ ಬಸವರಾಜ್ ರವರು ಧ್ಜಜಾರೋಹಣ ನೆರವೇರಸಿ ಮಾತನಾಡಿದರು, ಈ ದಿನದ ಮಹತ್ವ ಕುರಿತು ನಿವೃತ್ತ ಸೇನಾ ಯೋಧರಾದ ಮನು ರವರು, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಪ್ಸರಿ ಬೇಗಮ್, ಸದಸ್ಯರಾದ ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ಔರಂಗಜೇಬ್, ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ಗೋವಿಂದರಾಜ್, ಹಾಗೂ ಸೋಮವಾರಪೇಟೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷಿಣಿಯಾದ ವೇದಾವತಿ ರವರು ಮತ್ತು ಕರವೇ ಅಧ್ಯಕ್ಷರಾದ ಶ್ರೀ ಯುತ ರಾಜೇಶ್ ರವರು ಈ ದಿನದ ಮಹತ್ವ ಕುರಿತು ಮಾತನಾಡಿದರು. ಕೊಡ್ಲಿಪೇಟೆ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಲಾಯಿತು ಹಾಗೂ ಸಂವಿಧಾನದ ಪೀಠಿಕೆ ಓದಲಾಯಿತು.ಈ ಸಂದರ್ಬದಲ್ಲಿ ನಿವೃತ್ತ ಯೋಧರಾದ ದೇವರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ಧೇಶಕರುಗಳಾದ ವಹಾಬ್ , ಪುಷ್ಫಲತಾ, ಶಿಕ್ಷಕರಾದ ಡಿ.ಪಿ.ಸತೀಶ್ ಎಸ್ ಡಿ ಎಂಸಿ ಅಧ್ಯಕ್ಷರಾದ ಡಿ.ಎನ್ ವಸಂಥ್ ರವರು, ಕೊಡ್ಲಿಪೇಟೆ ಹೋಬಳಿ ಕರವೇ ಘಟಕದ ಪದಾಧಿಕಾರಿಗಳಾದ ಉಪಾಧ್ಯಕ್ಷರುಗಳಾದ ಶೋಭ ಮಂಜುನಾಥ್, ಮತ್ತು ಕೆಂಚೇಶ್ವರ್,ರವರು ಕಾಳಯ್ಯ ಮಾಸ್ಟರ್, ದೇವರಾಜ್ ಕೂಡ್ಲೂರು, ಡಿ.ಬಿ ಕೇಶವ, ಯೋಗಾನಂದ, ಮಿಮಿಕ್ರಿ ಧರ್ಮಪ್ಪ, ಹೂವಮ್ಮ, ತೇಜೇಶ್, ಗಿರೀಶ್ , ರಾಣಿ,ಮಂಜುನಾಥ್, ಧರ್ಮಪ್ಪ, ಇಂದ್ರೇಶ್, ಜೆ.ಡಿ.ಮಂಜುನಾಥ್ ಭಾಸ್ಕರ್ ಆಚಾರ್ಯ, ಬಿ.ಪಿ ರಾಜು, ಕೊಡ್ಲಿಪೇಟೆ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಕೂರ್ಗ್ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಎಲ್ಲಾ ಸದಸ್ಯರುಗಳು, ಹಾಗೂ ಸಾರ್ಜನಿಕ ಬಂಧುಗಳು ಭಾಗವಹಿಸಿದ್ದರು.ಕಾರ್ಯದರ್ಶಿ ಡಿ.ಆರ್. ವೇದಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿಸಿದರು.

JOHNSON KODAGU

Related Articles

Leave a Reply

Your email address will not be published. Required fields are marked *

Back to top button