ಕೊಡ್ಲಿಪೇಟೆ :ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ವಿದ್ಯಾರ್ಥಿ ಸಂಘದ ನಾಯಕರುಗಳ ಆಯ್ಕೆ?
ಕೊಡ್ಲಿಪೇಟೆ :ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ವಿದ್ಯಾರ್ಥಿ ಸಂಘದ ನಾಯಕರುಗಳನ್ನು ಅಯ್ಕೆ ಮಾಡಿ ಅವರಿಗೆ ಬ್ಯಾಡ್ಜ್ ನೀಡುವ ಕಾರ್ಯಕ್ರಮ ವನ್ನು ಅದ್ದೂರಿಯಾಗಿ ಮಾಡಲಾಯಿತು.
ಸಮಾರಂಭವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್ ಸಿ ಐ ಬಿ ವರದಿಗಾರರಾದ ಪಾಸ್ಟರ್ . ಫ್ರೆಡ್ಡಿ ಕೊಡ್ಲಿಪೇಟೆ ಅವರು ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸಂಗೀತ ದೊಡ್ಡಮನಿ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು
ಶಾಲೆಯ ವಿದ್ಯಾರ್ಥಿ ಸಂಘದ ಅದ್ಯಕ್ಷರಾಗಿ 9ನೇ ತರಗತಿ ವಿದ್ಯಾರ್ಥಿ ಆಯುಷ್ಮಾನ್, ಉಪಾಧ್ಯಕ್ಷರಾಗಿ 9ನೇ ತರಗತಿ ವಿದ್ಯಾರ್ಥಿನಿ ನಫೀಸತ್ ಹಯಾ, ಕಾರ್ಯದರ್ಶಿಯಾಗಿ 9ನೇ ತರಗತಿಯ ವಿದ್ಯಾರ್ಥಿನಿ ಆಶ್ರಿತ ಹಾಗೂ ಶಿಸ್ತು ನಾಯಕರುಗಳಾಗಿ ಪೂರ್ವ, ತಯ್ಯಬ್, ಅಫೀಫ, ದರ್ಶನ್, ಸೂರಜ್, ಧನುಷ್, ಪ್ರಣವ್, ಅಸ್ನ ಎಂಬವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಾಸ್ಟರ್ . ಫ್ರೆಡ್ಡಿ ಕೊಡ್ಲಿಪೇಟೆ ಅವರು ಹಾಗೂ ಸಿಸ್ಟರ್ ಲೂಸಿ ಜೋಸೆಫ್ ಅವರು ಬ್ಯಾಡ್ಜ್ ನೀಡಿದರು. ಶಾಲಾ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ನಾಲಕ್ಕು ಹೌಸ್ ಗುಂಪು ಮಾಡಲಾಗಿದ್ದು ಆಯಾ ಗುಂಪಿನ ನಾಯಕರುಗಳಿಗೆ ಸಿಸ್ಟರ್ ಎಲಿಜಬೆತ್ ಮತ್ತು ಶಿಕ್ಷಕಿ ಲೋಲಾಕ್ಷಿ ಬ್ಯಾಡ್ಜ್ ನೀಡಲಾಯಿತು. ಸಿಸ್ಟರ್ ಹಿಲ್ಡಾ ಮೇರಿ ಅವರು ಗುಂಪಿನ ಬಾವುಟವನ್ನೂ ನಾಯಕರುಗಳಿಗೆ ನೀಡಿ ಗೌರವಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಸ್ಟರ್ . ಫ್ರೆಡ್ಡಿ ಕೊಡ್ಲಿಪೇಟೆ ಅವರು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿ ನಾಯಕರುಗಳು ತಮ್ಮ ಜೀವನದಲ್ಲಿ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಉಳ್ಳವರಾಗಿರಬೇಕು ಹಾಗೂ ಆತ್ಮವಿಶ್ವಾಸ, ಶಿಕ್ಷಕ ವೃಂದದವರ ಜೊತೆ ಒಳ್ಳೆ ಒಡನಾಟ ಹೊಂದಿರಬೇಕು ಸಹ ವಿದ್ಯಾರ್ಥಿಗಳ ಜೊತೆ ಪ್ರೀತಿಯಿಂದ ನಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು ಹಾಗೂ ಪ್ರತೀ ವಿದ್ಯಾರ್ಥಿಗಳು ತಾವು ಇತರ ವಿದ್ಯಾರ್ಥಿಗಳಿಗೆ ಮಾದರಿ ಜೀವಿತ ನಡೆಸುವವರು ಮತ್ತು ಯಾವುದೇ ಯವ್ವನದ ಮೋಹಗಳಿಗೆ ಬಿದ್ದು ತಮ್ಮ ವಿದ್ಯಾರ್ಥಿ ಜೀವನ ಹಾಳು ಮಾಡಿ ಕೊಳ್ಳ ಬಾರದು ಹಾಗೂ ಪ್ರತೀ ವಿದ್ಯಾರ್ಥಿಗಳು ಒಳ್ಳೆ ಗುಣಗಳ ಹೊಂದಿ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೇ ಇರುವುದಾದರೆ ದೇಶವೂ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಆವರ ಜೀವನ ಶೈಲಿ ಹಾಗೂ ಆವರ ಮಾರ್ಗ ದರ್ಶನ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿ ಕೊಂಡು ಓದಿ ಉನ್ನತ ಮಟ್ಟಕ್ಕೆ ಬರಲು ಸಲಹೆ ನೀಡಿದರು
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು
ಕಾರ್ಯಕ್ರಮವನ್ನೂ ವಿದ್ಯಾರ್ಥಿಗಳಾದ ಶುಭ, ಅನ್ಫಾ ಮತ್ತು ಸಭಾ ನಿರೂಪಿಸಿದರು ಮತ್ತು 7ನೇ ತರಗತಿ ವಿದ್ಯಾರ್ಥಿ ಅಸ್ನ ವಂದನಾರ್ಪಣೆಯನ್ನು ಸಲ್ಲಿಸಿದರು ಈ ಸಂದರ್ಬದಲ್ಲಿ ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಂಗೀತ ದೊಡ್ಡಮನಿ, ಸಿಸ್ಟರ್ ಹಿಲ್ಡಾ ಮೇರಿ, ಸಿಸ್ಟರ್ ಎಲಿಸಬತ್ ಶಿಕ್ಷಕ ವೃಂದದವರು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು
ವರದಿಗಾರರು : ಫ್ರೆಡ್ಡಿ PC