ಕೊಡ್ಲಿಪೇಟೆ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ದೃವ್ಯ ವಿರೋಧಿ ದಿನವನ್ನು ಆಚರಿಸಲಾಯಿತು
ಕೊಡ್ಲಿಪೇಟೆ :ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಂತರಾಷ್ಟೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಸಂಬಂಧ ಶಾಲೆಯ ಶಿಕ್ಷಕ ಸುದೀನ್ ಹಾಗೂ ಶಿಕ್ಷಕಿ ಶೈಲ ಜಾಗೃತಿ ಮೂಡಿಸಿದರು.
ಶಾಲೆಯ ಶಿಕ್ಷಕರಾದ ಸುದೀನ್ ಮಾತನಾಡಿ ಮಾದಕ ವಸ್ತುಗಳ ವಿರೋಧಿ ದಿನ ಅಂದರೆ ಅದನ್ನು ವಿರೋಧಿಸುವುದು, ಆ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಚಿಂತನ-ಮಂಥನವನ್ನು ನಾವು ಈ ಸಮಯದಲ್ಲಿ ಮಾಡಲೇಬೇಕಾಗಿದೆ. ಪ್ರಾರಂಭದಲ್ಲಿದ್ದ ಅಭ್ಯಾಸ ನಂತರ ಚಟವಾಗಿ ಬದಲಾಗುತ್ತದೆ ಈ ಬಗ್ಗೆಯೂ ನಾವು ಚಿಂತಿಸಬೇಕಲ್ಲವೇ? ಯಾವುದೋ ಸಿನಿಮಾ, ನಾಟಕ, ಧಾರಾವಾಹಿಗಳ ಪ್ರಪಂಚದಲ್ಲಿ ಸರ್ವೇ ಸಾಮಾನ್ಯವಾಗಿ ಕಷ್ಟ ಬಂದಾಗ, ಹೆಚ್ಚು ಕೋಪ ಬಂದಾಗ, ಮನಸ್ಸಿಗೆ ಬೇಸರವಾದಾಗ ಮದ್ಯವನ್ನು ಕುಡಿಯುವ, ಬೀಡಿ ಸಿಗರೇಟು ಸೇದುವ ದೃಶ್ಯಗಳು ಕಾಣಿಸುತ್ತವೆ ಇಂತವುಗಳಿಗೆ ನಮ್ಮ ಮನಸ್ಸು ಒಳಪಡದೆ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ಮತ್ತು ವೃತ್ತಿಜೀವನದ ಬಗ್ಗೆ ಜಾಗೃತರಾಗಿರಬೇಕು ಹೇಳಿದರು. ನಂತರ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿಸಿದರು
ಈ ಸಂದರ್ಬದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಂಗೀತ ದೊಡ್ಡಮನಿ ಹಾಗೂ ಶಾಲೆಯ ಶಿಕ್ಷಕಿಯರಾದ ಲೋಲಾಕ್ಷಿ, ಶೈಲ ಇತರ ಶಿಕ್ಷಕಿಯರು ಉಪಸ್ಥಿತರಿದ್ದರು
ತಾಲ್ಲೂಕು ವರದಿಗಾರರು :ಫ್ರೆಡ್ಡಿ ಪಿಸಿ