ಕೊಡ್ಲಿಪೇಟೆ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ:
ಕೊಡ್ಲಿಪೇಟೆ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ10ನೇ ಅಂತಾರಾಷ್ಟ್ರಿಯ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಾಸನಗಳನ್ನು ಶಾಲಾ ಮಕ್ಕಳಿಂದ ಮಾಡಿಸಲಾಯಿತು. ಮಕ್ಕಳನ್ನು ಉದ್ದೇಶಿಸಿ ಶಿಕ್ಷಕಿ ಸ್ವೇತ ಅವರು ಮಾತನಾಡಿ, ಜಗತ್ತಿಗೆ ಯೋಗವನ್ನು ಅನಾದಿ ಕಾಲದಿಂದಲೂ ಪರಿಚಯ ಮಾಡಿ ಕೊಟ್ಟಿರುವುದು ನಮ್ಮ ಭಾರತ ದೇಶದ ಋಷಿ ಮುನಿಗಳಾಗಿದ್ದಾರೆ ಕ್ರಿ .ಶ 2015 ಜೂನ್ 21 ರಂದು ದೆಹಲಿಯ ರಾಜಪೂತ್ ನಲ್ಲಿ ಅಂತಾರಾಷ್ಟ್ರಿಯ ವಿಶ್ವ ಯೋಗ ದಿನಾಚರಣೆ ಪ್ರಾರಂಭವಾಯಿತು ಆ ದಿನ ಸುಮಾರು 88 ರಾಷ್ಟ್ರಗಳು ಸಹ ಯೋಗ ದಿನ ಪ್ರಾರಂಭಿಸಿದರು. ನಾವು ದಿನ ಪೂರ್ತಿ ಚಟುವಟಿಕೆಯಿಂದ ಇರಬೇಕಾದರೆ ಎಲ್ಲಾ ದಿನ ಯೋಗ ಅಭ್ಯಾಸ ಮಾಡಬೇಕು ಹಾಗೂ ಯೋಗ ಮಾಡುವ ವ್ಯಕ್ತಿಯು ತುಂಬಾ ಆರೋಗ್ಯವಂತನಾಗಿರುತ್ತಾನೆ ಮತ್ತೂ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣವಾಗುತ್ತದೆ. ಒಳ್ಳೆಯ ಜೀವನಶೈಲಿ, ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ಚಿಂತನೆ ಮಾಡುತ್ತಾ ಕಾಯಕ ಯೋಗದ ಮೂಲಕ ಸಾರ್ಥಕವಾಗಿ ಬದುಕೋಣ ಎಂದು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಂಗೀತ ದೊಡ್ಡಮನಿ , ವ್ಯವಸ್ಥಾಪಕಿ ಸಿಸ್ಟರ್ ಲೂಸಿ, ಸಹ ಶಿಕ್ಷಕಿಯರು ಮತ್ತು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿಗಾರರು : ಫ್ರೆಡ್ಡಿ PC
.