ಕೊಡ್ಲಿಪೇಟೆ ಯಲ್ಲಿ ಮೈಸೂರು ಕೊಡಗು ಜಿಲ್ಲೆಯ ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ಯಿಂದ ಬಿರುಸಿನ ಪ್ರಚಾರ
ಕೊಡ್ಲಿಪೇಟೆ:ಕೊಡ್ಲಿಪೇಟೆ ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಅಭ್ಯರ್ಥಿ ಯನ್ನು ಬೃಹತ್ ಹೂವಿನ ಹಾರವನ್ನ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು
ನಂತರ ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಹಾಗೂ ಕಾಂಗ್ರೆಸ್ ವಕ್ತಾರ ಕರ್ನಾಟಕ ಉಚ್ಚ ನ್ಯಾಯಾಲಯ ದ ಹಿರಿಯ ವಕೀಲರಾದ ಚಂದ್ರಮೌಳಿ ಹಾಗೂ ಮಡಿಕೇರಿ ಶಾಸಕರಾದ ಡಾ. ಮಂಥರ್ ಗೌಡ ಅವರು ಕೊಡ್ಲಿಪೇಟೆ ಬಸ್ ನಿಲ್ದಾಣದ ಸಮೀಪದ ಅಂಗಡಿಗಳಲ್ಲಿ ಮತ ಯಾಚಿಸಿದರು , ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್ ನಲ್ಲಿ ಹತ್ತಿ ಪ್ರಯಾಣಿಕ ಬಳಿ ಮತ ಯಾಚಿಸಿದರು ಹಾಗೂ ಸ್ತ್ರೀಯರ ಬಳಿ ನಿಮಗೆ ಸರಕಾರದ ಗ್ಯಾರಂಟಿ ಹಣ ಬರುತ್ತಿದೆಯೇ ಉಚಿತ ವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದೀರಾ ಎಂದೂ ಕುಶಲ ವಿಚಾರಿಸಿದರು,
ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದ ಮಡಿಕೇರಿ ಶಾಸಕರಾದ ಡಾ. ಮಂಥರ್ ಗೌಡ ಅವರು ಇಲ್ಲಿ ಯಾವ ಮೋದಿ ಹವಾ ನಡಿಯುತ್ತಿಲ್ಲ ನನ್ನನ್ನು ಗೆಲ್ಲಿಸಿದ ಉಮ್ಮಸಿನಿಂದ ಲಕ್ಷ್ಮಣ್ ಅವರನ್ನ ಗೆಲ್ಲಿಸ ಬೇಕೆಂದು ಕರೆ ನೀಡಿದರು,
ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ತಮ್ಮ ಭಾಷಣದಲ್ಲಿ ಇನ್ನೂ ರಾಜ್ಯದಲ್ಲಿ ನಾಲಕ್ಕು ವರ್ಷ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುತ್ತೆ ಈ ಬಾರಿ ದೇಶದಲ್ಲಿ ಇಂಡಿಯಾ ಉಕ್ಕೂಟ ಅಧಿಕಾರಕ್ಕೆ ಬರುತ್ತೇ ನನ್ನನ್ನು ಗೆಲ್ಲಿಸಿದರೆ ನೂರಕ್ಕೆ ನೂರರಷ್ಟು ಹೆಚ್ಚು ಅನುದಾನ ತರಲು ಅನುಕೂಲ ಆಗುತ್ತೆ ಮತ್ತು ರಾಜ್ಯ ಸರ್ಕಾರದ ಜೊತೆ ಮತ್ತು ಎಂ ಎಲ್ ಎ ಜೊತೆ ಕೆಲಸ ಮಾಡಲು ಸಾಧ್ಯ ಆಗುತ್ತದೆ ನಾನುಮೈಸೂರ್ ನಲ್ಲಿ ಹದಿನೈದು ದಿನಗಳ ಕಾಲ ಮತ್ತು ಮಡಿಕೇರಿಯಲ್ಲಿ ಕಛೇರಿ ತೆಗದು ಹದಿನೈದು ದಿನಗಳ ಕಾಲ ತಿಂಗಳಿನಲ್ಲಿ ಇರುತ್ತೇನೆ ಅಂದರು,
ಚಂದ್ರಮೌಳಿ ಮಾತನಾಡಿ ಹತ್ತು ವರ್ಷಗಳ ಕಾಲ ನಮ್ಮ ಸಂಸದರು ಸಂಸತ್ತಿನಲ್ಲಿ ಕೊಡಗಿನ ಮೂಲ ಸೌಕರ್ಯದ ಬಗ್ಗೆ ಒಂದು ಪ್ರಶ್ನೆಯನ್ನು ಕೇಳಲಿಲ್ಲ ಮಾಜಿ ಸಂಸದರು ಬಂದರೆ ನೀವು ಕೊಡಗಿಗೆ ಎನು ಮಾಡಿದ್ದೀರಿ ಎಂದು ಕೇಳಿ ಅಂದರು
ಈ ಸಂದರ್ಬದಲ್ಲಿ ಕೊಡಗು ಜಿಲ್ಲೆಯ ಕಾಂಗ್ರೇಸ್ ಅಧ್ಯಕ್ಷರೂ, ಪ್ರದಾನ ಕಾರ್ಯದರ್ಶಿ ಜಿ ಎಲ್ ಜನಾರ್ದನ ಹಾಗೂ ಕಾರ್ಯಕರ್ತರು ಹಾಗೂ ಡಾಕ್ಟರ್ ಉದಯ್ ಕುಮಾರ್ ಉಪ್ಥಿತರಿದ್ದರು ಕಾರ್ಯಕ್ರಮವನ್ನು ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಔರಂಗ್ ಜೇಬ್ ನಿರೂಪಿಸಿದರು..
ವರದಿ;ಫ್ರೆಡ್ಡಿ ಕೊಡ್ಲಿಪೇಟೆ