ಸುದ್ದಿ
ಕೊಡ್ಲಿಪೇಟೆಯಲ್ಲಿ ಸಮಸ್ತ ಸ್ಥಾಪನಾ ದಿನ ಆಚರಣೆ
ಕೊಡ್ಲಿಪೇಟೆ: ಎಸ್ಕೆಎಸ್ಎಸ್ಎಫ್ ಹಾಗೂ ಎಸ್ ವೈ ಎಸ್ ಕೊಡ್ಲಿಪೇಟೆ ಶಾಖೆಯ ವತಿಯಿಂದ ಸಮಸ್ತ ಸ್ಥಾಪನಾ ದಿನದ ಅಂಗವಾಗಿ “ಆದರ್ಶ ಪರಿಶುದ್ಧತೆಯೊಂದಿಗೆ ಶತಮಾನದೆಡೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸಮೀಪದ ಹ್ಯಾಂಡ್ ಪೋಸ್ಟ್ ನಲ್ಲಿರುವ ಶಾಖಾ ಕಛೇರಿಯ ಮುಂಭಾಗ ಧ್ವಜಾರೋಹಣ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಝಹೀರ್ ನಿಝಾಮಿ ಧ್ವಜಾರೋಹಣ ನೆರವೇರಿಸಿದರು. ಎಸ್ ವೈ ಎಸ್ ಸದಸ್ಯರಾದ ಉಮ್ಮರ್, ಕಾರ್ಯದರ್ಶಿಗಳಾದ ತೌಫೀಕ್, ಅಷ್ಫಾಕ್, ಅಬ್ದುಲ್ ರಶೀದ್ ಹಾಗೂ ಸಮಿತಿ ಸದಸ್ಯರುಗಳಾದ ರಶೀದ್ ಎಲೆಕ್ಟ್ರಿಷಿಯನ್, ಸೌಕತ್ ಅಲಿ, ಶಾಕಿರ್ ಭಾಗವಹಿಸಿದ್ದರು.
ವರದಿಗಾರರು :ಫ್ರೆಡ್ಡಿ PC