ಸುದ್ದಿ

ಕೊಡ್ಲಿಪೇಟೆಯಲ್ಲಿ ತೀವ್ರ ಏರ್‌ಟೆಲ್ ನೆಟ್ವರ್ಕ್ ಸಮಸ್ಯೆ: ಗ್ರಾಹಕರ ಆಕ್ರೋಶ ಜನಸಾಮಾನ್ಯರ, ಪರದಾಟ

ಕೊಡ್ಲಿಪೇಟೆ:ಏರ್‌ಟೆಲ್ ಕಂಪೆನಿಯ ಗ್ರಾಹಕರು ಈ ಪ್ರದೇಶದಲ್ಲಿ ಬಹಳಷ್ಟು ಮಂದಿ ಇದ್ದಾರೆ. ನೆಟ್ ಹಾಕಿಸಿಕೊಂಡಿದ್ದಾರೆ ಅದರೆ ಇದು ಪ್ರಯೋಜನಕ್ಕೆ ಬಂದಿಲ್ಲ, ಗ್ರಾಮಗಳಲ್ಲಿ ಗ್ರಾಹಕರು ನಿತ್ಯಗೋಳು ಅನುಭವಿಸಬೇಕಾಗಿದೆ. ಕಾರಣ ನೆಟ್ವರ್ಕ್ ಸಮಸ್ಯೆ ಕಾಲ್ ಮಾಡಿ ಕಾಲೇ ಸಿಗುವುದಿಲ್ಲ. ಸಿಕ್ಕಿದರೂ, ಇನ್ನೊಬ್ಬರು ಮಾತನಾಡುವುದು ಕೇಳುವುದೇ ಇಲ್ಲ, ಟವರ್ ಇದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಸ್ಪಂದನೆ ದೊರಕಿಲ್ಲ, ಇನ್ನುಳಿದಿರುವುದು ಪ್ರತಿಭಟನೆಯೊಂದೇ ದಾರಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ, ಕಂಪೆನಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

Reporter

Freddy PC

Related Articles

Leave a Reply

Your email address will not be published. Required fields are marked *

Back to top button